ADVERTISEMENT

ಮತ್ತೆ ಹೋರಾಟಕ್ಕೆ ರೇಷ್ಮೆ ಕೃಷಿಕರು

ಪ್ರಜಾವಾಣಿ ವಿಶೇಷ
Published 24 ಫೆಬ್ರುವರಿ 2012, 10:00 IST
Last Updated 24 ಫೆಬ್ರುವರಿ 2012, 10:00 IST

ಚಿಕ್ಕಬಳ್ಳಾಪುರ: ರೇಷ್ಮೆ ಕೃಷಿಕರ ರಕ್ಷಣೆಗೆ, ರೇಷ್ಮೆ ಉದ್ಯಮದ ಅಭಿವೃದ್ಧಿಗೆ ಮತ್ತು ನ್ಯಾಯಯುತ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸಮರ್ಪಕವಾಗಿ ಸ್ಪಂದಿ ಸುತ್ತಿಲ್ಲ ಎಂದು ಆರೋಪಿಸಿರುವ ರೇಷ್ಮೆ ಕೃಷಿಕರು ಮತ್ತು ರೀಲರುಗಳು ಮತ್ತೆ ಹೋರಾಟಕ್ಕಿಳಿದಿದ್ದಾರೆ.  

 ಜಿಲ್ಲಾದ್ಯಂತ ಅಲ್ಲದೇ ರಾಜ್ಯದಾದ್ಯಂತ ಬಂದ್ ಮಾಡಿದರೂ ಬೇಡಿಕೆಗಳಿಗೆ ಯಾವುದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಬೇಸರ ಗೊಂಡು ಈಗ ಅಂಚೆ ಪತ್ರ ಚಳವಳಿ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ.

ರೇಷ್ಮೆಗೂಡಿಗೆ ಬೆಂಬಲ ಬೆಲೆ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಬಂದ್‌ಗಳನ್ನು ನಡೆಸಿರುವ ರೇಷ್ಮೆ ಕೃಷಿಕರು ಮತ್ತು ರೀಲರುಗಳು ಇದೇ ಪ್ರಪ್ರಥಮ ಬಾರಿಗೆ ಅಂಚೆಪತ್ರ ಚ ವಳಿಗೆ ಮುಂದಾಗಿದ್ದಾರೆ.

ಜಿಲ್ಲೆಯ ಆರೂ ತಾಲ್ಲೂಕುಗಳಿಂದಲೂ ಚಳವಳಿಗೆ ಚಾಲನೆ ನೀಡಲು ತೀರ್ಮಾನಿಸಿರುವ ಹೋರಾಟ ಗಾರರು ಆಯಾ ತಾಲ್ಲೂಕುಗಳ ರೇಷ್ಮೆ ಕೃಷಿಕರಿಂದ ನವದೆಹಲಿಯಲ್ಲಿರುವ ಪ್ರಧಾನಿಯವರ ಕಚೇರಿಗೆ ಪತ್ರ ಕಳುಹಿಸುತ್ತಿದ್ದಾರೆ.

`ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಅತಿ ಹೆಚ್ಚು ರೇಷ್ಮೆ ಬೆಳೆಯಲಾಗುತ್ತದೆ. ಲಕ್ಷಾಂತರ ಮಂದಿ ರೇಷ್ಮೆಕೃಷಿಯನ್ನೇ ಅವಲಂಬಿಸಿದ್ದಾರೆ ಎಂಬ ಅಂಶ ಗೊತ್ತಿದ್ದರೂ ಕೇಂದ್ರ ಸರ್ಕಾರವು ಸಂಪೂರ್ಣವಾಗಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ.
 
ಒಂದು ವರ್ಷದಿಂದ ಅಹಿಂಸಾತ್ಮವಾಗಿ ಹೋರಾಟ ನಡೆಸಿದರೂ ಸರ್ಕಾರ ಮಾತ್ರ ಕನಿಷ್ಠ ಕಾಳಜಿಯೂ ತೋರಿಲ್ಲ. ನ್ಯಾಯ ಸಿಗುವವರೆಗೆ ನಿರಂತರವಾಗಿ ನಡೆ ಸಲು ಉದ್ದೇಶಿಸಿರುವ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಎಂಬ ಉದ್ದೇಶದಿಂದ ಅಂಚೆ ಪತ್ರ ಚಳವಳಿ ಆರಂಭಿಸಿದ್ದೇವೆ~ ಎಂದು  ಕೃಷಿಕರು ಹೇಳುತ್ತಾರೆ.

`ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಬಂಡ ವಾಳಶಾಹಿಗಳಂತೆ ನಾವು ಲಕ್ಷಾಂತರ ಕೋಟಿ ರೂಪಾಯಿ ಕೇಳುತ್ತಿಲ್ಲ. ನಮ್ಮ ಹೋರಾಟ ಹಿಂಸಾತ್ಮಕ ರೂಪವೂ ಪಡೆದಿಲ್ಲ. ರಾಜ್ಯ ಸರ್ಕಾರದ ವತಿಯಿಂದ ನವದೆಹಲಿಗೆ ಹೋದರೂ ಪ್ರಧಾನಿಯಿಂದ ಮತ್ತು ಕೇಂದ್ರ ಸಚಿವರಿಂದ ಉತ್ತಮ ರೀತಿಯ ಪ್ರತಿಕ್ರಿಯೆ ಸಿಗಲಿಲ್ಲ.
 
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆ ಗಳನ್ನು ಪ್ರತಿನಿಧಿಸುವ ಕೇಂದ್ರ ಸಚಿವರಾದ ವೀರಪ್ಪ ಮೊಯಿಲಿ ಮತ್ತು ಕೆ.ಎಚ್.ಮುನಿಯಪ್ಪ ಅವರು ಈಗಲೂ ಭರವಸೆಗಳನ್ನು ನೀಡುತ್ತಿದ್ದಾರೆ ಹೊರತು ಯಾವುದನ್ನು ಅನುಷ್ಠಾನಗೊಳಿಸುತ್ತಿಲ್ಲ~ ಎಂದು ಎಂಬ ಅಸಮಾಧನ ಈಗ ರೀಲರುಗಳಲ್ಲಿ ಮೂಡಿದೆ.

ರೇಷ್ಮೆಗೂಡು ಕೆಜಿಗೆ 350 ರೂಪಾಯಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು, ಸುಂಕರಹಿತ ರೇಷ್ಮೆ ಆಮದನ್ನು ನಿಷೇಧಿಸಬೇಕು ಮತ್ತು ಆಮದು ಸುಂಕವನ್ನು ಶೇ 31ಕ್ಕೆ ಏರಿಸಬೇಕು ಎಂಬ ಮೂರು ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ರೇಷ್ಮೆಕೃಷಿಕರು ಮತ್ತು ರೀಲರುಗಳು ಕಳೆದ ಜುಲೈ 30ರಂದು ಜಿಲ್ಲಾ ಬಂದ್ ಅಲ್ಲದೇ ರಾಜ್ಯದಾದ್ಯಂತ ಮುಷ್ಕರ ನಡೆಸಿದ್ದರು.

ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಹೇರಲು ಸುಂಕರಹಿತ ರೇಷ್ಮೆ ವಿರೋಧಿ ಅಖಿಲ ಭಾರತ ಹೋರಾಟ ಸಮಿತಿ ರಚಿಸಿಕೊಂಡು ದಕ್ಷಿಣ ಭಾರತ ಮಟ್ಟದಲ್ಲಿ ಹೋರಾಟಕ್ಕೆ ಚಾಲನೆ ಸಹ ನೀಡಿದ್ದರು. ನವೆಂಬರ್‌ನಲ್ಲಿ ಉಪವಾಸ ಸತ್ಯಾಗ್ರಹ ಸಹ ಕೈಗೊಂಡಿದ್ದರು.

`ರೇಷ್ಮೆಕೃಷಿಕರು ಮತ್ತು ರೀಲರುಗಳತ್ತ ಸರ್ಕಾರ ಯಾಕಿಷ್ಟು ನಿರ್ಲಕ್ಷ್ಯ ತೋರುತ್ತಿದೆ ಎಂಬುದು ಇನ್ನೂ ಅರ್ಥವಾಗುತ್ತಿಲ್ಲ. ರೈತಪರ ಮತ್ತು ಕೃಷಿಗೆ ಆದ್ಯತೆ ನೀಡುವ ಸರ್ಕಾರ ಎಂದು ಪದೇ ಪದೇ ಹೇಳ ಲಾಗುತ್ತದೆ. ಬಜೆಟ್ ಮಂಡಿಸುವ ಸಂದರ್ಭದಲ್ಲೂ ಕೃಷಿಗೆ ಒತ್ತು ಕೊಡುವ ಬಗ್ಗೆ ಆಶ್ವಾಸನೆ ನೀಡ ಲಾಗುತ್ತಿದೆ.
 
ಆದರೆ ಭರವಸೆಗಳು ಮತ್ತು ಬೇಡಿಕೆ ಗಳ ಅನುಷ್ಠಾನ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾಕೆ ಹಿಂಜರಿಯುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ~ ಎಂದು ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಸಂಚಾಲಕ ಯಲು ವಹಳ್ಳಿ ಸೊಣ್ಣೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.

`ರೇಷ್ಮೆ ಉದ್ಯಮ ದುಸ್ಥಿತಿ ಕಂಡು ಬಹುತೇಕ ಮಂದಿ ರೇಷ್ಮೆಕೃಷಿಯನ್ನೇ ಕೈಬಿಡುತ್ತಿದ್ದಾರೆ. ಬೇರೆ ಕೃಷಿ ಚಟುವಟಿಕೆ ಕೈಗೊಳ್ಳಲು ಅವರ ಬಳಿ ಬಂಡವಾಳವಿಲ್ಲ. ಸಾಲದ ಕಾಟದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಹಂತ ತಲುಪಿದ್ದಾರೆ.

ಇನ್ನೂ ಕೆಲವರು ಸಾಲಗಾರರಿಗೆ ಮುಖ ತೋರಿಸ ಲಾಗದೇ ದೂರದ ಊರುಗಳಿಗೆ ವಲಸೆ ಹೋಗು ತ್ತಿದ್ದಾರೆ. ಇದೇ ರೀತಿಯ ಪರಿಸ್ಥಿತಿ ಮುಂದು ವರೆದರೆ, ಜಿಲ್ಲೆಯಲ್ಲಿ ರೇಷ್ಮೆಕೃಷಿ ಮತ್ತು ಚಟುವಟಿಕೆಯ ಅಸ್ತಿತ್ವವೇ ಸಂಪೂರ್ಣವಾಗಿ ನಶಿಸ ಲಿದೆ~ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.