ADVERTISEMENT

ಮಳೆಗಾಗಿ ಮಕ್ಕಳು ಅರೆಬೆತ್ತಲೆ...

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 9:20 IST
Last Updated 15 ಸೆಪ್ಟೆಂಬರ್ 2011, 9:20 IST

ಚಿಂತಾಮಣಿ: ಗ್ರಾಮೀಣ ಭಾಗದಲ್ಲಿ ಮಳೆ ಬಾರದಿದ್ದಾಗ ಮಳೆರಾಯನಿಗಾಗಿ ಪ್ರಾರ್ಥಿಸಿ ವಿಶೇಷ ಹೋಮ ಹವನ, ಕುಂಬಾಭಿಷೇಕ, ಕತ್ತೆ, ಕಪ್ಪೆಗಳ ಮದುವೆ ಸಾಮಾನ್ಯ. ಆದರೆ ತಾಲ್ಲೂಕಿನ ನಾಯಿಂದ್ರಹಳ್ಳಿಕಾಲೊನಿಯಲ್ಲಿ ಮಂಗಳವಾರ ಸಂಜೆ ಮಕ್ಕಳು ಅರೆಬೆತ್ತಲೆ ಮೆರವಣಿಗೆ ನಡೆಸಿದರು.

ಅರೆ ಬೆತ್ತಲೆಯಾಗಿ ತಲೆ ಮೇಲೆ ಮಳೆರಾಯನನ್ನು ಹೊತ್ತುಕೊಂಡು ಹೊಯ್ಯೋ ಹೊಯ್ಯೋ ಮಳೆರಾಯ ಎಂದು ಹಾಡುತ್ತಾ ಕಾಲೊನಿಯಲ್ಲಿ ಮೆರವಣಿಗೆ ನಡೆಸಿದರು.

ಇತ್ತೀಚೆಗೆ ಮಳೆಗಾಗಿ ಅನೇಕ ಗ್ರಾಮದಲ್ಲಿ ಇಂತಹ ವಿಶಿಷ್ಟ ಸಂಪ್ರದಾಯದಿಂದ ಪ್ರಾರ್ಥನೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಈ ಪ್ರದೇಶದಲ್ಲಿ ಮಳೆ ಈ ವರ್ಷ ಕೈಕೊಟ್ಟಿದ್ದು ಜನರು ದಿನವೂ ಆಕಾಶದ ಕಡೆಗೆ ನೋಡಿ ಮಳೆಗಾಗಿ ಪ್ರಾರ್ಥಿಸುವುದು ಮೇಲಿಂದ ಮೇಲೆ ನಡೆಯುತ್ತಿದೆ.

ಕೆಲವು ಕಡೆ ಇನ್ನೂ ಬಿತ್ತನೆ ಸಹ ಆಗಿಲ್ಲ. ಬಿತ್ತನೆಯಾಗಿರುವುದು ಮೊಳಕೆಯೂ ಆಗಿಲ್ಲ. ಕೆಲವಡೆ ಮೊಳಕೆಯೊಡೆದ ಬೆಳೆ ಈಗ ಒಣಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.