ADVERTISEMENT

ರೇಷ್ಮೆಕೃಷಿಕರ ಅಂಚೆ ಚಳವಳಿ ಆರಂಭ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 9:55 IST
Last Updated 24 ಫೆಬ್ರುವರಿ 2012, 9:55 IST

ಶಿಡ್ಲಘಟ್ಟ: ಆಮದು ರೇಷ್ಮೆಯ ಮೇಲೆ ಸುಂಕ ಕಡಿತ ದಿಂದಾದ ದುಷ್ಪರಿಣಾಮಗಳ ಬಗ್ಗೆ ಪ್ರಧಾನ ಮಂತ್ರಿಗೆ ವಿವರಿಸಿ ಪತ್ರ ಬರೆದು ಕಳುಹಿಸುವ ಚಳವಳಿ ಯನ್ನು ಗುರುವಾರ ಪಟ್ಟಣದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಏರ್ಪಡಿಸಿತ್ತು.

ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಬೆಂಗಳೂರು ನಗರ, ಗ್ರಾಮಾಂತರ, ತುಮ ಕೂರು ಮತ್ತಿತರರೆ ಜಿಲ್ಲೆಗಳು ಸೇರಿದಂತೆ ಒಂದು ಲಕ್ಷ ಪತ್ರಗಳನ್ನು ಪ್ರಧಾನ ಮಂತ್ರಿಗೆ ಕಳುಹಿಸುವ ಕಾರ್ಯದಲ್ಲಿ ಜಿಲ್ಲೆಯಿಂದ 20 ಸಾವಿರ ಪತ್ರಗಳನ್ನು ಕಳುಹಿಸುವ ಚಳವಳಿಗೆ ಅಧಿಕೃತ ಚಾಲನೆ ಸಿಕ್ಕಿತು.

ರೇಷ್ಮೆಯನ್ನು ನಂಬಿ ಲಕ್ಷಾಂತರ ಮಂದಿ ಜೀವನ ನಡೆಸುತ್ತಿದ್ದಾರೆ. ರೇಷ್ಮೆ ಬೆಳೆಗಾರರ ಸಮಸ್ಯೆ ಪರಿ ಹಾರಕ್ಕೆ ರಾಜ್ಯದ ಕೇಂದ್ರ ಸಚಿವರು ಚುನಾ ವಣೆಯ ನೆಪ ಮಾಡಿ ದಿನಗಳು ದೂಡುತ್ತಿದ್ದಾರೆ.

ಈಗ ರೈತರ ಬಳಿಯಿರುವುದೊಂದೇ ಮಾರ್ಗ. ಹೋರಾಟ ಮಾಡಲೇ ಬೇಕಿದೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಅವರಿಗೆ ವಿಷಯ ತಿಳಿಸಲು ಲಕ್ಷ ಪತ್ರ ಗಳನ್ನು ಕಳುಹಿಸುತ್ತಿದ್ದೇವೆ~ ಎಂದು ರೈತರು  `ಪ್ರಜಾವಾಣಿ~ಯೊಂದಿಗೆ ಹಂಚಿಕೊಂಡರು.

`ಚೀನಾ ರೇಷ್ಮೆಯ ಮೇಲೆ ಸುಂಕವನ್ನು ಕಡಿತ ಗೊಳಿಸಿ ಕೆಂಪು ಹಾಸು ಹಾಕಿ ಸ್ವಾಗತಿಸುತ್ತಿದೆ. ಇದು ಇಲ್ಲಿನ ರೈತರಿಗೆ ಅಪಾರ ನಷ್ಟ ಉಂಟಾಗುತ್ತದೆ. ದೇಶದ ಬೆನ್ನೆಲುಬಾದ ರೈತ ಮತ್ತು ಬಡ ರೀಲರುಗಳನ್ನು ಕಾಪಾಡಬೇಕಾದರೆ ಚೀನಾ ರೇಷ್ಮೆ ಮೇಲೆ ಸುಂಕ ಹೆಚ್ಚಿಸಬೇಕು.

ಪ್ರತ್ಯೇಕ ರೇಷ್ಮೆ ನೀತಿ ರೂಪಿಸಬೇಕು ಎಂದು ನಾವು ಪ್ರಧಾನಮಂತ್ರಿ ಅವರಿಗೆ ವಿವರಿಸಿ ಪತ್ರ ಬರೆದಿದ್ದೇವೆ~ ಎಂದು ರೈತ ಮುಖಂಡ ಯಲುವಳ್ಳಿ ಸೊಣ್ಣೇಗೌಡ ತಿಳಿಸಿದರು.


ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎಂ.ನಾರಾ ಯಣಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ರಾಜಣ್ಣ, ಸುರೇಶ್, ಹರೀಶ್, ಬೈರೇಗೌಡ, ಬೈಯಣ್ಣ, ಕೃಷ್ಣಪ್ಪ, ಕೆಂಪರೆಡ್ಡಿ, ರಾಮಕೃಷ್ಣಪ್ಪ, ರಮೇಶ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT