ADVERTISEMENT

ಶಿಡ್ಲಘಟ್ಟದಲ್ಲಿ ಕರಿಚೇಳು ದರ್ಶನ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 9:10 IST
Last Updated 19 ಜೂನ್ 2011, 9:10 IST
ಶಿಡ್ಲಘಟ್ಟದಲ್ಲಿ ಕರಿಚೇಳು ದರ್ಶನ
ಶಿಡ್ಲಘಟ್ಟದಲ್ಲಿ ಕರಿಚೇಳು ದರ್ಶನ   

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅನೇಕ ಜೀವವೈವಿದ್ಯ ಪ್ರಬೇಧಗಳಿವೆ. ಕೆಲವು ಕ್ರಮೇಣ ಕಡಿಮೆಯಾಗುತ್ತಿದ್ದರೆ, ಕೆಲವು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಆಗಾಗ್ಗೆ ಗೋಚರಿಸಿ ಅಚ್ಚರಿ ಮೂಡಿಸುತ್ತವೆ. ಅವುಗಳಲ್ಲಿ ವಿಷಜೀವಿ ಎಂದೇ ಕರೆಯಲ್ಪಡುವ ಕರಿ ಚೇಳು ಸಹ ಒಂದು.

ಶಿಡ್ಲಘಟ್ಟದ ಹೊರ ವಲಯದಲ್ಲಿ ಕಾಣಸಿಕ್ಕ ಕರಿ ಚೇಳು ವಿಷಜೀವಿ. ಅದರ ಕೊಂಡಿಯು ಮನುಷ್ಯನ ಜೀವಕ್ಕೆ ಕಂಟಕ ತರಬಹುದು. ಈ ಜೀವಿಗೆ ಮಂಡರಗಪ್ಪೆ ಎಂದೂ ಸಹ ಕರೆಯುತ್ತಾರೆ.

ಎಂಟು ಕಾಲುಗಳು, ಇಕ್ಕಳದಂತಹ ಕೊಂಡಿಗಳು ಮತ್ತು ತುದಿಯಲ್ಲಿ ವಿಷದ ಕೊಂಡಿಯಿರುವ ಬಾಲ ಇದರ ವಿಶೇಷ ಲಕ್ಷಣಗಳು. ಚೇಳುಗಳಲ್ಲಿ ಹಲವಾರು ವಿಧಗಳಿದ್ದರೂ ಕೇವಲ 25 ಪ್ರಬೇಧಗಳು ಮಾತ್ರ ವಿಷಕಾರಿ.

ಇವುಗಳು ತಮ್ಮ ಆಹಾರವಾಗುವ ಕೀಟ, ಹಲ್ಲಿ, ಕಪ್ಪೆ ಮೊದಲಾದ ಜೀವಿಗಳಿಗೆ ತಮ್ಮ ಬಾಲದ ತುದಿಯಲ್ಲಿರುವ ಕೊಂಡಿಯಿಂದ ಕುಟುಕುತ್ತವೆ. ಆಗ ನಿಸ್ತೇಜಗೊಂಡ ಬೇಟೆಯನ್ನು ಸ್ವಾಹ ಮಾಡುತ್ತವೆ. ಹಾಗೆಯೇ ಆತ್ಮರಕ್ಷಣೆಗೂ ಇದೇ ಕೊಂಡಿಯನ್ನು ಬಳಸುತ್ತದೆ.

ಚೇಳುಗಳು 430 ದಶಲಕ್ಷ ವರ್ಷಗಳಿಂದಲೂ ಈ ಭೂಮಿಯ ವಾಸಿಯಾಗಿದ್ದು, ಎಲ್ಲ ರೀತಿಯ ಹವಾಮಾನ ಮತ್ತು ಭೂಪ್ರದೇಶಗಳಲ್ಲಿ ಹೊಂದಿಕೊಂಡಿವೆ. ಕೆಲವು ನೆಲದೊಳಗೆ ವಾಸಿಸಿದರೆ, ಮರಗಲನ್ನು ಕೆಲವು ಆಶ್ರಯಿಸುತ್ತವೆ. ಕಲ್ಲುಗಳ ಅಡಿ ಸೇರಲು ಕೆಲವು ಬಯಸಿದರೆ, ಕೆಲ ಚೇಳುಗಳಿಗೆ ಮರಳೇ ಪ್ರಿಯವಾದ ಸ್ಥಾನ.

ಚೇಳು ಕಡಿತಕ್ಕೆ ಜನಪದ ವೈದ್ಯದಲ್ಲಿ ಮಂತ್ರ ಹಾಕುತ್ತಾರೆ. ಶಿಲ್ಪ ಕಲೆಯಲ್ಲೂ ಚೇಳಿಗೆ ಪ್ರಾಶಸ್ತ್ಯವನ್ನು ನೀಡಲಾಗಿದೆ. ತಾಲ್ಲೂಕಿನ ಎಚ್.ಕ್ರಾಸಿನಲ್ಲಿರುವ ದೇವಾಲಯದಲ್ಲಿ ಚೇಳಿನ ಶಿಲ್ಪಕಲೆಯಿದೆ. ಬಾಲದ ಕೊಂಡಿಯಲ್ಲಿ ಇದು ಕುಟುಕು ವುದರಿಂದ ಕೊಂಡಿಯನ್ನು ಹಿಡಿದರೆ ಇದು ನಿರಪಾಯಕಾರಿ~ ಎಂದು ಸಾಹಿತಿ ಸ.ರಘುನಾಥ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.