ADVERTISEMENT

ಸುಂಕ ರಹಿತ ರೇಷ್ಮೆ ಆಮದು ನಿರ್ಣಯ.ಸರ್ಕಾರಕ್ಕೆ ಒತ್ತಡ ಹೇರಲು ಮನವಿ.

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 8:50 IST
Last Updated 11 ಮಾರ್ಚ್ 2011, 8:50 IST

ಚಿಕ್ಕಬಳ್ಳಾಪುರ: ಸುಂಕ ರಹಿತ ರೇಷ್ಮೆ ಆಮದು ನಿರ್ಣಯವನ್ನು ಹಿಂಪಡೆಯಲು ಮತ್ತು ಆಮದು ಸುಂಕದ ಮೊತ್ತವನ್ನು ಶೇ 5 ರಿಂದ ಶೇ. 31ಕ್ಕೆ ಏರಿಸಲು ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ  ಒತ್ತಡ ಹೇರಬೇಕು ಎಂದು ಆಗ್ರಹಿಸಿ ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ರೇಷ್ಮೆ ಕೃಷಿಕರು ಬೆಂಗಳೂರಿನಲ್ಲಿ ಶಾಸಕರಿಗೆ ಮನವಿ ಮಾಡಿದರು.

ಚಿಕ್ಕಬಳ್ಳಾಪುರ ಶಾಸಕ ಕೆ.ಪಿ.ಬಚ್ಚೇಗೌಡ, ಚಿಂತಾಮಣಿ ಶಾಸಕ ಡಾ. ಸುಧಾಕರ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಅವರನ್ನು ಭೇಟಿಯಾದ ರೇಷ್ಮೆ ಕೃಷಿಕರು, ‘ಸರ್ಕಾರಗಳ ಮೇಲೆ ತುರ್ತಾಗಿ ಒತ್ತಡ ಹೇರಬೇಕು. ರೇಷ್ಮೆಕೃಷಿಕರು ಎದುರಿಸುತ್ತಿರುವ ಸಂಕಷ್ಟವನ್ನು ವಿವರಿಸಬೇಕು’ ಎಂದು ಮನವಿ ಮಾಡಿದರು.‘ಸುಮಾರು 350 ರೂಪಾಯಿಯಿದ್ದ ಒಂದು ಕೆಜಿ ರೇಷ್ಮೆಗೂಡಿನ ಬೆಲೆ 150 ರಿಂದ 200 ರೂಪಾಯಿಗೆ ದಿಢಿ ೀರ್‌ನೇ ಕುಸಿದಿದೆ. ಇದರ ಪರಿಣಾಮ ರೇಷ್ಮೆಕೃಷಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸರ್ಕಾರ ತನ್ನ ನಿರ್ಣಯವನ್ನು ಹಿಂಪಡೆದಲ್ಲಿ, ರೇಷ್ಮೆ ಕೃಷಿಕರಿಗೆ ಅನುಕೂಲವಾಗಲಿದೆ. ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನಗಾಣಿಸಬೇಕು’ ಎಂದು ಅವರು ಮನವಿ ಮಾಡಿದರು.ವೇದಿಕೆ ಮುಖಂಡರಾದ ಕೆ.ಆಂಜನಪ್ಪ, ಮಳ್ಳೂರು ಶಿವಣ್ಣ, ಯಲುವಹಳ್ಳಿ ಸೊಣ್ಣೇಗೌಡ, ಸಿ.ಪಿ.ಹರೀಶ್, ಜಿಲ್ಲಾ ಪಂಚಾಯಿತಿ ಸದಸ್ಯ ಸೊಣ್ಣೇನಹಳ್ಳಿ ನಾರಾಯಣಸ್ವಾಮಿ, ರೈತ ಮುಖಂಡರಾದ ಭಕ್ತರಹಳ್ಳಿ ಬೈರೇಗೌಡ, ಯಲುವಹಳ್ಳಿ ಮುನೇಗೌಡ, ಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.