ADVERTISEMENT

ಸ್ತ್ರೀಶಕ್ತಿ ಸಂಘಗಳಿಗೆ ಸಾಲ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 10:50 IST
Last Updated 12 ಜನವರಿ 2012, 10:50 IST

ಗೌರಿಬಿದನೂರು: ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಬೇಕು. ಬ್ಯಾಂಕ್‌ನಿಂದ ದೊರೆಯುವ ಆರ್ಥಿಕ ನೆರವು ಮತ್ತು ಇತರ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬೆಂಗಳೂರು ವಿಭಾಗೀಯ ಕೆನರಾ ಬ್ಯಾಂಕ್ ವ್ಯವಸ್ಥಾಪಕ  ಧನುಂಜಯ ತಿಳಿಸಿದರು.

ಪಟ್ಟಣದ  ನದಿಗಡ್ಡೆಯ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ  ಕೆನರಾ ಬ್ಯಾಂಕ್ ವತಿಯಿಂದ ಬುಧವಾರ ಕಾದಲವೇಣಿ, ಗೊಂಡಾಪುರ, ಗೊಟಕ ನಾಪುರ ಹಾಲಿನ ಕೇಂದ್ರಗಳ ಸದಸ್ಯರಿಗೆ ಮತ್ತು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ  50 ಮಂದಿ ಫಲಾನುಭವಿಗಳಿಗೆ 45 ಲಕ್ಷ ರೂಪಾಯಿ ಮೌಲ್ಯದ ಸಾಲ ಚೆಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

`ಹಪ್ಪಳ, ಉಪ್ಪಿನಕಾಯಿ, ಸಾಂಬರ್ ಪದಾರ್ಥಗಳನ್ನು ತಯಾರಿಸುವ ಮಹಿಳೆ ಯರು ಆರ್ಥಿಕವಾಗಿ ಬಲಿಷ್ಠರಾಗಬೇಕು. ತಾವು ತಯಾರಿ ಸುವ ಪದಾರ್ಥಗಳ ಮೂಲಕ ಜೀವನದಲ್ಲಿ ಪ್ರಗತಿ ಸಾಧಿಸಬಹುದು. ತಮ್ಮ ಗ್ರಾಮಗಳ ಹಾಲಿನ ಕೇಂದ್ರಗಳಿಗೆ ಹಾಲು ಪೂರೈಸುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಯಾಗಬಹುದು~ ಎಂದು ಅವರು ಹೇಳಿದರು.

ಪಟ್ಟಣದ  ಕೆನರಾ ಬ್ಯಾಂಕ್ ವ್ಯವಸ್ಥಾಪಕ ಬಿ.ಆರ್.ರಾಮಚಂದ್ರ, ನಂದಿನಿ  ಮಹಿಳಾ ಹಾಲು ಉತ್ಪಾದಕರ ಸಂಘದ ಮುಖ್ಯಸ್ಥೆ ಇಂದಿರಾ, ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ರಮೇಶ್, ಬ್ಯಾಂಕ್ ಕ್ಷೇತ್ರ ಅಧಿಕಾರಿ ಗೀತಾ, ವೆಂಕಟಪ್ಪ, ಹಾಲು ಉತ್ಪಾದಕರ ಸಹಕಾರ ಸಂಘಗಳ  ಕಾರ್ಯದರ್ಶಿಗಳಾದ ಕೃಷ್ಣಪ್ಪ, ನರಸಿಂಹಮೂರ್ತಿ, ಸ್ತ್ರೀಶಕ್ತಿ ಸ್ವಸಹಾಯ ಸಂಘದ ಪ್ರತಿನಿಧಿ ರಮಾದೇವಿ  ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.