ADVERTISEMENT

ಹಿರಿಯರಿಗೆ ಗುರುತಿನ ಚೀಟಿ ವಿತರಣೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 7:59 IST
Last Updated 14 ಡಿಸೆಂಬರ್ 2013, 7:59 IST

ಶಿಡ್ಲಘಟ್ಟ: ಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 120 ಮಂದಿ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ­ಗಳನ್ನು ವಿತರಿಸಲಾಗುತ್ತಿದ್ದು, ಅದನ್ನು ಬಳಸಿಕೊಂಡು ಸರ್ಕಾರದಿಂದ 13 ವಿಧದ ಸೌಲಭ್ಯಗಳನ್ನು ಪಡೆಯ­ಬಹುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಶಾಂತ್‌ ತಿಳಿಸಿದರು.

ತಾಲ್ಲೂಕಿನ ಮಳ್ಳೂರು ಪಂಚಾಯಿತಿ ಕಾರ್ಯಾಲಯದಲ್ಲಿ ಶುಕ್ರವಾರ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ಹಲ ಸೌಲಭ್ಯಗಳನ್ನು ನೀಡುತ್ತಿದೆ. ಗ್ರಾಮ ಪಂಚಾಯಿತಿಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ­ಯಿಂದ ಅನುಮೋದಿತವಾದ ಸಂಸ್ಥೆಯ ಸಹಕಾರದಿಂದ ಹಿರಿಯ ನಾಗರಿಕರಿಗೆ ಕಚೇರಿಗಳನ್ನು ತಿರುಗುವ ತೊಂದರೆ ತಪ್ಪಿಸಿ ಗುರುತಿನ ಚೀಟಿ ವಿತರಿಸುವ ಕಾರ್ಯವನ್ನು ಹಮ್ಮಿ­ಕೊಂಡಿದೆ ಎಂದು ಹೇಳಿದರು.

ಅಂಗವಿಕಲರ ಆರೋಗ್ಯಾಧಿಕಾರಿ ಡಾ.ಶಾಂತಾ ಅರಸ್‌, ಜಂಗಮಕೋಟೆ ಹೋಬಳಿ ಗ್ರೇಡ್‌ 2 ತಹಶೀಲ್ದಾರ್‌ ವೆಂಕಟೇಶ್‌, ಶಶಾಂಕ್‌, ಮಧು, ರಾಮ­ರೆಡ್ಡಿ, ಮಂಜುನಾಥ್‌, ಮುನಿಮಲ್ಲಪ್ಪ, ಮುನಿಶಾಮರೆಡ್ಡಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.