ಚಿಕ್ಕಬಳ್ಳಾಪುರ: ನಿಯಮಿತ ಬಸ್‌ಗಳ ಸಂಚಾರ ವಿಲ್ಲದೇ ಪಾಳುಬಿದ್ದಂತೆ ಕಾಣಸಿಗುವ ನಗರದ ಹೊಸ ಬಸ್ ನಿಲ್ದಾಣದ ಪ್ರದೇಶದಲ್ಲಿ ಜಿಲ್ಲಾ ಡಳಿತವು ನೂತನ ಜಿಲ್ಲಾ ಆಸ್ಪತ್ರೆ ನಿರ್ಮಿಸಲು ಚಿಂತನೆ ನಡೆಸಿದ್ದು, ಇಡೀ ಪ್ರದೇಶವನ್ನು ಹಸ್ತಾಂತರಿಸಲು ಸಾರಿಗೆ ಇಲಾಖೆ ಒಪ್ಪಿಗೆ ಸೂಚಿ ಸಿದೆ. ಆದರೆ ನೂತನ ಜಿಲ್ಲಾ ಆಸ್ಪತ್ರೆ ನಿರ್ಮಾ ಣಕ್ಕೆ ಸಂಬಂಧಿಸಿದಂತೆ ಪ್ರದೇಶವು ಸೂಕ್ತ ವಾದುದ್ದಲ್ಲ. ಇಡೀ ಪ್ರಾಂಗಣ ಸಾಕಾಗುವುದಿಲ್ಲ ಎಂಬ ಅಪಸ್ವರ ಕೇಳಿ ಬರುತ್ತಿದೆ.
ಪ್ರಸ್ತುತ ಜಿಲ್ಲಾ ಆಸ್ಪತ್ರೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳೇ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆ ನಿರ್ಮಾ ಣಕ್ಕೆ ಬೇಕಿರುವ ಒಟ್ಟು ಪ್ರದೇಶ ಮತ್ತು ಸೌಕರ್ಯದ ಪರಿಕಲ್ಪನೆ ಯಿಲ್ಲದೇ ಅಸ್ಪತ್ರೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೆಲವರು ಆರೋಪಿಸಿದರೆ, `ಬೃಹತ್ ಅತ್ಯಾ ಧುನಿಕ ಮಾದ ರಿಯ ಆಸ್ಪತ್ರೆ ನಿರ್ಮಾಣಕ್ಕೆ ಇಷ್ಟು ಜಾಗ ಸಾಕಾಗುವುದಿಲ್ಲ~ ಎಂಬ ಅಭಿ ಪ್ರಾಯ ಇನ್ನೂ ಕೆಲವರು ವ್ಯಕ್ತಪಡಿಸುತ್ತಿದ್ದಾರೆ.
ಈಗಿರುವ ಜಿಲ್ಲಾ ಆಸ್ಪತ್ರೆಗೆ ಅಗತ್ಯ ಮೂಲ ಸೌಕರ್ಯಗಳನ್ನು ಪೂರೈಸುವಲ್ಲಿ ವಿಫಲವಾಗಿ ರುವ ರಾಜ್ಯ ಸರ್ಕಾರ ನೂತನ ಆಸ್ಪತ್ರೆ ನಿರ್ಮಿ ಸುವುದಾದರೂ ಯಾವಾಗ ಎಂಬ ಪ್ರಶ್ನೆಯನ್ನೂ ಕೇಳುತ್ತಿದ್ದಾರೆ.
ಸುಮಾರು ನೂರು ಹಾಸಿಗೆ ಸಾಮರ್ಥ್ಯದ ಈಗಿನ ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚುವರಿ ಸೌಕ ರ್ಯ ಕಲ್ಪಿಸಲಾಗುವುದಿಲ್ಲ. ಹೆಚ್ಚಿನ ಸಂಖ್ಯೆ ಯಲ್ಲಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ನಗರದ ಬಿ.ಬಿ.ರಸ್ತೆಯ ಬದಿಯಲ್ಲಿರುವ ಬಸಪ್ಪ ಛತ್ರದ ಆವರಣದಲ್ಲಿ ನೂತನ ಆಸ್ಪತ್ರೆ ನಿರ್ಮಿಸಲು ಯೋಜಿಸಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಕೇಂದ್ರ ಸಚಿವ ವೀರಪ್ಪ ಮೊಯಿಲಿ ಪರಿ ಶೀಲನೆ ನಡೆಸಿ, ಒಪ್ಪಿಗೆ ಸಹ ಸೂಚಿಸಿದ್ದರು.
ಆದರೆ ಕಾರಣಾಂತರದಿಂದ ನೂತನ ಆಸ್ಪತ್ರೆ ನಿರ್ಮಾಣ ಯೋಜನೆ ಅನುಷ್ಠಾನವಾಗಲಿಲ್ಲ. ಬಸಪ್ಪ ಛತ್ರ ಸೂಕ್ತವಾದ ಸ್ಥಳವಲ್ಲ ಎಂಬ ಅಭಿಪ್ರಾಯ ಕೇಳಿ ಬಂದಾಗ, ಈಗಿರುವ ಜಿಲ್ಲಾ ಆಸ್ಪತ್ರೆ ಪಕ್ಕದ ನ್ಯಾಯಾಲಯದ ಆವರಣದಲ್ಲೇ ಆಸ್ಪತ್ರೆಯನ್ನು ನಿರ್ಮಿಸಲು ಯೋಜಿಸ ಲಾಯಿ ತು.
ಪ್ರದೇಶ ಹಸ್ತಾಂತರಿಸಲು ನ್ಯಾಯಾಲಯ ಒಪ್ಪಿಗೆ ಸೂಚಿಸಿದರೂ ನಿರ್ಮಾಣ ಯೋಜನೆ ಜಾರಿಗೆ ಬರಲಿಲ್ಲ. ಈಗ `ಹೊಸ ಆಶಾಕಿರಣ~ ಎಂಬಂತೆ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ನೂತನ ಆಸ್ಪತ್ರೆ ನಿರ್ಮಿಸಲು ಕ್ರಮ ಕೈಗೊಳ್ಳ ಲಾಗುತ್ತಿದೆ. ಆದರೆ ಇದಕ್ಕೂ ಅಪಸ್ವರ ಕೇಳಿ ಬಂದಿದೆ.
`ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಯವರ ಮಟ್ಟದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ನೂತನ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು.
ಹೊಸ ಬಸ್ ನಿಲ್ದಾಣದ ಪ್ರದೇಶದಲ್ಲಿ 200 ಹಾಸಿಗೆ ಸಾಮರ್ಥ್ಯದ ನೂತನ ಆಸ್ಪತ್ರೆ ನಿರ್ಮಾ ಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದರೆ, ನಿಲ್ದಾಣದ ಪ್ರದೇಶವನ್ನು ಹಸ್ತಾಂ ತರಿಸಲು ಸಾರಿಗೆ ಇಲಾಖೆ ಒಪ್ಪಿಗೆ ನೀಡಿದೆ.
ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ದೂರೆತಲ್ಲಿ, ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ~ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿ ಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.
ಆದರೆ ಇದರ ಬಗ್ಗೆ ಜಿಲ್ಲಾ ಆಸ್ಪತ್ರೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳೇ ಅಪಸ್ವರ ವ್ಯಕ್ತಪಡಿಸುತ್ತಾರೆ.
`ಹೊಸ ಬಸ್ ನಿಲ್ದಾಣದ ಪ್ರದೇಶವು ಸುಮಾರು 5 ಎಕರೆಯಷ್ಟು ಇದ್ದು, ಅಷ್ಟು ಜಾಗ ಸಾಕಾಗುವುದಿಲ್ಲ.
ಜಿಲ್ಲೆಯ ಅಭಿವೃದ್ಧಿ ಅನುಗುಣವಾಗಿ ದೂರದೃಷ್ಟಿಗೆ ಆದ್ಯತೆ ನೀಡಿದ್ದಲ್ಲಿ, 300 ರಿಂದ 500 ಹಾಸಿಗೆ ಸಾಮರ್ಥ್ಯದ ಜಿಲ್ಲಾ ಆಸ್ಪತ್ರೆ ನಿರ್ಮಾಣವಾಗಬೇಕು. ಪ್ರತ್ಯೇಕ ತುರ್ತು ಚಿಕಿತ್ಸಾ ಘಟಕ ಸೌಲಭ್ಯ ಇರಬೇಕು. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ವಸತಿ ಸಮುಚ್ಚಯ ನಿರ್ಮಿಸಬೇಕು.
ಅಂಬುಲೆನ್ಸ್, ಕಾರು, ದ್ವಿಚಕ್ರ ವಾಹನ ಮತ್ತು ಇತರ ವಾಹನಗಳ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್ ಸೌಲಭ್ಯ ಇರಬೇಕು. ಇದಲ್ಲದೇ ವಿಶ್ರಾಂತಿಗಾಗಿ ಮತ್ತು ಆಸ್ಪತ್ರೆಯ ಅಂದಕ್ಕಾಗಿ ಉದ್ಯಾನ ಸಹ ಇರಬೇಕು. ಈ ಎಲ್ಲವನ್ನೂ 5 ಎಕರೆಯಷ್ಟು ಪ್ರದೇಶದಲ್ಲಿ ಒದಗಿಸಲು ಸಾಧ್ಯವೇ~ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಕೇಳುತ್ತಾರೆ.
`20 ಎಕರೆಯಷ್ಟು ಜಮೀನು ಅಗತ್ಯ~
ಚಿಕ್ಕಬಳ್ಳಾಪುರ: ನೂತನ ಜಿಲ್ಲಾ ಆಸ್ಪತ್ರೆಯನ್ನು 20 ಎಕರೆಯಷ್ಟು ಜಮೀನಿನಲ್ಲಿ ನಿರ್ಮಿಸಬೇಕೆ ಹೊರತು 5 ಎಕರೆಯಷ್ಟು ಜಮೀನಿನಲ್ಲಿ ಆಸ್ಪತ್ರೆಯನ್ನು ನಿರ್ಮಿಸಲು ಕಷ್ಟಸಾಧ್ಯವಾಗುತ್ತದೆ. ತಾಲ್ಲೂಕಿನ ಅಣಕನೂರು ಗ್ರಾಮದ ಬಳಿಯಿರುವ 20 ಎಕರೆಯಷ್ಟು ಜಮೀನಿನಲ್ಲಿ ನಿರ್ಮಿಸಿದರೆ, ಅನುಕೂಲವಾಗುತ್ತದೆ ಎಂದು ಸಮಾನ ಮನಸ್ಕರ ಸ್ಪಂದನಾ ಸಮಿತಿ ತಿಳಿಸಿದೆ.
`ಹೊಸ ಬಸ್ ನಿಲ್ದಾಣ ಪ್ರದೇಶವು ಈ ಹಿಂದೆ ತಿಮ್ಮೇಗೌಡನ ಕೆರೆಯಾಗಿತ್ತು. ಈಗಲೂ ಭಾರಿ ಮಳೆಯಾದಲ್ಲಿ ಇಡೀ ಪ್ರದೇಶವು ಕೆರೆಯ ಸ್ವರೂಪ ಪಡೆದುಕೊಳ್ಳುತ್ತದೆ. ಅಲ್ಲಿ ನೀರು ನಿಲ್ಲುತ್ತದೆ. ನೂತನ ಆಸ್ಪತ್ರೆಗೆ ಬರಲು ಎಂ.ಜಿ.ರಸ್ತೆಯೊಂದೇ ಮಾರ್ಗವಾಗಿದ್ದು, ಅಲ್ಲಿ ಸದಾ ವಾಹನ ದಟ್ಟಣೆಯಿರುತ್ತದೆ.
ರೋಗಿಗಳು ಆಸ್ಪತ್ರೆಗೆ ಬರಲು ಅಷ್ಟೇ ಅಲ್ಲ, ಅಂಬುಲೆನ್ಸ್ ಮತ್ತು ಇತರ ವಾಹನಗಳ ಸಂಚಾರಕ್ಕೂ ಅಡಚಣೆಯಾಗುತ್ತದೆ~ ಎಂದು ಸಮಿತಿ ಸದಸ್ಯರ ಅನಿಸಿಕೆ.ವಿಶಾಲ ಪ್ರದೇಶದಲ್ಲಿ ಉದ್ಯಾನವೂ ಇದ್ದರೆ, ರೋಗಿಗಳಿಗೆ ಮತ್ತು ಸಂಬಂಧಿಕರಿಗೆ ವಿಶ್ರಾಂತಿ ಪಡೆಯಲೂ ಸಹ ಸಾಧ್ಯವಾಗುತ್ತದೆ~ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.