ADVERTISEMENT

ಕಾಲ್ತುಳಿತ ಪ್ರಕರಣ: ಪರಿಹಾರದ ಚೆಕ್ ವಿತರಣೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 16:24 IST
Last Updated 9 ಜೂನ್ 2025, 16:24 IST
ಚಿಂತಾಮಣಿ ತಾಲ್ಲುಕಿನ ಕುರುಟಹಳ್ಳಿ ಶ್ರವಣ್‌ ಕುಟುಂಬಕ್ಕೆ ಜಿಲ್ಲಾಧಿಕಾರಿ ಪರಿಹಾರದ ಚೆಕ್‌ ವಿತರಿಸಿದರು
ಚಿಂತಾಮಣಿ ತಾಲ್ಲುಕಿನ ಕುರುಟಹಳ್ಳಿ ಶ್ರವಣ್‌ ಕುಟುಂಬಕ್ಕೆ ಜಿಲ್ಲಾಧಿಕಾರಿ ಪರಿಹಾರದ ಚೆಕ್‌ ವಿತರಿಸಿದರು   

ಚಿಂತಾಮಣಿ: ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದ ಶ್ರವಣ್‌ (20) ಮನೆಗೆ ಸೋಮವಾರ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಭೇಟಿ ನೀಡಿ ₹25ಲಕ್ಷ ಪರಿಹಾರದ ಚೆಕ್‌ನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.

ಮೃತರ ತಾತ ಕೃಷ್ಣಪ್ಪ ಮತ್ತು ತಂದೆ ತಿಮ್ಮಯ್ಯ ಚೆಕ್‌ ಸ್ವೀಕರಿಸಿದರು. ಕೃಷಿ ಪದವಿ ಮುಗಿಸಿರುವ ಮೃತನ ಸೋದರನಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಕುಟುಂಬ ಸದಸ್ಯರು ಮನವಿ ಮಾಡಿದರು. 

ತಾಲ್ಲೂಕಿನ ಕುರುಟಹಳ್ಳಿ ಗ್ರಾಮದ ಕೆ.ಟಿ.ಶ್ರವಣ್‌ ಬೆಂಗಳೂರಿನ ಅಂಬೇಡ್ಕರ್‌ ದಂತ ವೈದ್ಯಕೀಯ ಕಾಲೇಜಿನಲ್ಲಿ ದ್ವಿತೀಯ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.

ADVERTISEMENT

ಗ್ರೇಡ್‌ 2 ತಹಶೀಲ್ದಾರ್‌ ರಾಜೇಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.