ADVERTISEMENT

17 ಅಭ್ಯರ್ಥಿಗಳಿಗೆ ನೋಟಿಸ್

ಪ್ರಜಾವಾಣಿ ವಾರ್ತೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 8:55 IST
Last Updated 25 ಏಪ್ರಿಲ್ 2013, 8:55 IST

ಬಾಗೇಪಲ್ಲಿ:  ಪಟ್ಟಣದ ಚುನಾವಣಾಧಿಕಾರಿಗಳ ಕಚೇರಿಗೆ ಬುಧವಾರ ಚುನಾವಣಾ ವೆಚ್ಚ ವೀಕ್ಷಕ ದಿನೇಶ್ ಬೋಯರ್ ಭೇಟಿ ನೀಡಿ, ಅಭ್ಯರ್ಥಿಗಳ ಖರ್ಚು-ವೆಚ್ಚದ ಬಗ್ಗೆ ಮಾಹಿತಿ ಪಡೆದರು. ಕ್ಷೇತ್ರದ ಚುನಾವಣಾ ಕಣದಲ್ಲಿರುವ 27 ಅಭ್ಯರ್ಥಿಗಳ ಪೈಕಿ 10 ಮಂದಿ ಮಾತ್ರವೇ ಚುನಾವಣಾ ವಿವರ ಸಲ್ಲಿಸಿದ್ದಾರೆ. ಉಳಿದ 17 ಮಂದಿಗೆ ನೋಟಿಸ್ ಹೊರಡಿಸಲಾಗಿದೆ.

`ಬಿಎಸ್‌ಪಿ ಅಭ್ಯರ್ಥಿ ಕೃಷ್ಣಪ್ಪ, ಬಿಜೆಪಿಯ ಎಂ.ನಾರಾಯಣಸ್ವಾಮಿ, ಸಿಪಿಎಂನ ಜಿ.ವಿ.ಶ್ರೀರಾಮರೆಡ್ಡಿ, ಕಾಂಗ್ರೆಸ್‌ನ ಎನ್.ಸಂಪಂಗಿ, ಜೆಡಿಎಸ್‌ನ ಹರಿನಾಥರೆಡ್ಡಿ, ಕೆಜೆಪಿಯ ಆರ್.ಮುನಿರಾಜು, ಬಿಎಸ್‌ಆರ್ ಕಾಂಗ್ರೆಸ್‌ನ ಎಚ್.ವಿ.ಶಿವಶಂಕರ್, ಪಕ್ಷೇತರರಾದ ಅಶ್ವತ್ಥ್‌ರೆಡ್ಡಿ, ಎಂ.ವಿ.ಕೇಶವರೆಡ್ಡಿ, ಎಂ.ಜಾವೀದ್, ಆರ್.ಎನ್.ರಘುನಾಥರೆಡ್ಡಿ, ಕೆ.ಎ.ಶ್ರೀನಾಥ್, ಎಸ್.ಎನ್.ಸುಬ್ಬಾರೆಡ್ಡಿ, ಸುಬ್ಬಿರೆಡ್ಡಿ, ಸುಬ್ಬಿರೆಡ್ಡಿ, ಸುಬ್ರಮಣಿ ಮತ್ತು ಆರ್.ಹರಿ ಅವರಿಗೆ ನೋಟಿಸ್ ಹೊರಡಿಸಲಾಗಿದೆ.

24 ಗಂಟೆಯೊಳಗೆ ಖರ್ಚು ವಿವರ ಸಲ್ಲಿಸಬೇಕು' ಎಂದು ಚುನಾವಣಾಧಿಕಾರಿ ಆರ್.ನಾಗರಾಜಶೆಟ್ಟಿ ತಿಳಿಸಿದರು.
ಸಹಾಯಕ ಚುನಾವಣಾಧಿಕಾರಿ ಪದ್ಮಾ, ಚುನಾವಣೆ ಸಹಾಯಕ ಸಿಬ್ಬಂದಿ ಕೆ.ವೆಂಕಟೇಶ್, ಆರ್.ಶ್ರೀಕಾಂತ್, ಅತಾವುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.