ADVERTISEMENT

ರೈತರ ಪಹಣಿಗೆ ಆಧಾರ್ ಜೋಡಣೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 3:18 IST
Last Updated 9 ಮಾರ್ಚ್ 2021, 3:18 IST
ಪಾತಪಾಳ್ಯದ ನಾಡ ಕಚೇರಿಯಲ್ಲಿ ಪ್ರಭಾರ ಉಪ ತಹಶೀಲ್ದಾರ್ ಎಲ್.ಎ. ರಘು ಪಾತಕೋಟೆ ಮತ್ತು ಗ್ರಾಮ ಲೆಕ್ಕಾಧಿಕಾರಿ ಎನ್. ವೆಂಕಟೇಶ್ ಅವರು ರೈತರಿಂದ ದಾಖಲೆಗಳನ್ನು ಸ್ವೀಕರಿಸಿದರು
ಪಾತಪಾಳ್ಯದ ನಾಡ ಕಚೇರಿಯಲ್ಲಿ ಪ್ರಭಾರ ಉಪ ತಹಶೀಲ್ದಾರ್ ಎಲ್.ಎ. ರಘು ಪಾತಕೋಟೆ ಮತ್ತು ಗ್ರಾಮ ಲೆಕ್ಕಾಧಿಕಾರಿ ಎನ್. ವೆಂಕಟೇಶ್ ಅವರು ರೈತರಿಂದ ದಾಖಲೆಗಳನ್ನು ಸ್ವೀಕರಿಸಿದರು   

ಚೇಳೂರು: ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಆಧಾರ್, ಪಹಣಿ ಜೋಡಣೆ ಆಂದೋಲನವು ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ಪ್ರಾರಂಭಗೊಂಡಿದ್ದು, ಪಾತಪಾಳ್ಯ ಹೋಬಳಿಯಲ್ಲೂ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಳ್ಳಿಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಬ್ಯಾಂಕಿನಲ್ಲಿ ಖಾತೆ ರೀತಿಯಲ್ಲೇ ಆಧಾರ್ ಕಡ್ಡಾಯ ಮಾಡಲಾಗಿದೆ. ಅದೇ ರೀತಿ ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಸೇರಿದಂತೆ ಇತರೇ ಸರ್ಕಾರಿ ಇಲಾಖೆಗಳಲ್ಲಿ ಸವಲತ್ತು ಪಡೆಯಲು ರೈತರು ತಮ್ಮ ಜಮೀನಿನ ಸರ್ವೇ ನಂಬರ್‌ಗಳಿಗೆ ಉಳಿತಾಯ ಖಾತೆ ಹಾಗೂ ಆಧಾರ್ ಸಂಖ್ಯೆ ಜೋಡಣೆ ಮಾಡುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯವರು ಮಾಹಿತಿ ಪಡೆಯುತ್ತಿದ್ದಾರೆ.

ಇದರಿಂದ ಬರ ಅಥವಾ ಪ್ರವಾಹ ಸ್ಥಿತಿಯಲ್ಲಿ ಬೆಳೆ ನಷ್ಟ ಪರಿಹಾರ ವಿತರಿಸಲು ಅನುಕೂಲವಾಗಲಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಲು, ರೇಷ್ಮೆ ಇಲಾಖೆ ಫಲಾನುಭವಿಗಳ ಬೆಳೆ ವಿವರ ರೂಪಿಸಲು, ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು, ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ಬೆಳೆ ಸಾಲ ವಿವರ ಪಡೆಯಲು ಅನುಕೂಲವಾಗಲಿದೆ.

ADVERTISEMENT

ಸರ್ಕಾರದ ಇತರೆ ಸೌಲಭ್ಯಗಳಿಗೆ ಸಹಕಾರಿಯಾಗಲಿದೆ. ರೈತರು ಕಂದಾಯ ಇಲಾಖೆಯೊಂದಿಗೆ ಕೈಜೋಡಿಸಿ ಅನುಕೂಲ ಪಡೆಯಬೇಕು ಎಂದು ಪಾತಪಾಳ್ಯದ ಪ್ರಭಾರ ಉಪ ತಹಶೀಲ್ದಾರ್ ಎಲ್.ಎ. ರಘು ಪಾತಕೋಟೆ ಮತ್ತು ಗ್ರಾಮ ಲೆಕ್ಕಾಧಿಕಾರಿ ಎನ್. ವೆಂಕಟೇಶ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.