ADVERTISEMENT

ಸರ್ಕಾರಿ ಶಾಲೆಗೆ ದಾಖಲಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 4:43 IST
Last Updated 11 ಅಕ್ಟೋಬರ್ 2020, 4:43 IST
ತುಳವನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಪೋಷಕರಿಗೆ ಉಚಿತ ಬ್ಯಾಗ್ ವಿತರಿಸಿದ ದಾನಿಗಳು
ತುಳವನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಪೋಷಕರಿಗೆ ಉಚಿತ ಬ್ಯಾಗ್ ವಿತರಿಸಿದ ದಾನಿಗಳು   

ಚಿಂತಾಮಣಿ: ‘ದೂರದ ಖಾಸಗಿ ಶಾಲೆಗಳಿಗೆ ಬದಲಾಗಿ ಸ್ವಗ್ರಾಮದ ಸರ್ಕಾರಿ ಶಾಲೆಗಳಿಗೆ ದಾಖಲಿಸುವುದು ಉತ್ತಮ’ ಎಂದು ದಾನಿ ಟಿ.ಎನ್.ಚಂದ್ರಶೇಖರರೆಡ್ಡಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬುರುಡಗುಂಟೆ ಕ್ಲಸ್ಟರ್‌ನ ತುಳವನೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಿಸಿ ಅವರು ಮಾತನಾಡಿದರು.

‘ಮಕ್ಕಳ ವಿದ್ಯಾಭ್ಯಾಸಕ್ಕಿಂತ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಪೋಷಕರು ಹೊಂದಿರಬೇಕು. ದಿನೇ ದಿನೇ ಕೊರೊನಾ ವೈರಸ್ ನಿಯಂತ್ರಣ ಮೀರಿ ವೇಗವಾಗಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ದೂರದ ಶಾಲೆಗಳಿಗೆ ಅಥವಾ ವಸತಿ ಶಾಲೆಗಳಿಗೆ ದಾಖಲಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ’ ಎಂದರು.

ADVERTISEMENT

ಮುಖ್ಯ ಶಿಕ್ಷಕ ಮೂಡಲಗೊಲ್ಲಹಳ್ಳಿ ಕೆ.ನರಸಿಂಹಪ್ಪ ಮಾತನಾಡಿ, ‘ಕೋವಿಡ್-19 ನಡುವೆಯೂ ವಿದ್ಯಾರ್ಥಿಗಳಿಗೆ ವಿದ್ಯಾಗಮದ ಮೂಲಕ ಕಲಿಕೆಯಾಗುತ್ತಿದೆ. ಮಳೆ, ಗಾಳಿ ಬಂದರೆ ಮಕ್ಕಳನ್ನು ಸಂರಕ್ಷಿಸಲು ಕಷ್ಟ
ವಾಗುತ್ತದೆ. ಸಂಕಷ್ಟಗಳ ನಡುವೆಯೂ ಮಕ್ಕಳ ಕಲಿಕೆ ನಿರಂತರವಾಗಿ ನಡೆಯುತ್ತಿದೆ’ ಎಂದರು.

ಸಹಶಿಕ್ಷಕ ಸಿ.ವೆಂಕಟರಮಣ, ವಿ.ಆಂಜನೇಯ ಪೋಷಕರಾದ ವೆಂಕಟರಮಣಪ್ಪ, ರಾಮಾಂಜಿ, ಆಂಜನೇಯ, ರತ್ನಮ್ಮ, ಶ್ಯಾಮಲ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.