ADVERTISEMENT

ಬಟ್ಲಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿಯ ಆಡಿಯೊ ವೈರಲ್: ತನಿಖೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 5:05 IST
Last Updated 11 ನವೆಂಬರ್ 2021, 5:05 IST
ಜಿ.ಕೆ.ಮಿಥುನ್ ಕುಮಾರ್
ಜಿ.ಕೆ.ಮಿಥುನ್ ಕುಮಾರ್   

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ಮಹಿಳೆಯೊಬ್ಬರ ಜತೆ ‘ಮುಕ್ತ’ವಾಗಿ ಮಾತನಾಡಿರುವ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಆಡಿಯೊ ಯಾವ ಸಮಯದ್ದು ಮತ್ತು ಆಡಿಯೊದಲ್ಲಿ ಇರುವ ವಿಚಾರಗಳು ಸತ್ಯವಾದವೇ, ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಲು ಪ್ರಕರಣ ಅರ್ಹವಾದುದೇ ಎನ್ನುವ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಆದೇಶಿಸಿದ್ದಾರೆ.

‘15 ಕುರಿಗಳನ್ನು ಸಂಪಾದಿಸಿದ್ದೇವೆ. ಠಾಣೆಯಲ್ಲಿ ಎಲ್ಲರಿಗೂ ಎರಡು ಕೆ.ಜಿ ಮಟನ್ ಕೊಡಬೇಕು. ಹಂಚಿಕೊಳ್ಳುತ್ತೇವೆ. ಬೇರೆ ಬೇರೆ ಸಿಬ್ಬಂದಿಯೂ ಕುರಿಗಳನ್ನು ತಂದಿದ್ದಾರೆ’ ಎಂದು ಬಟ್ಲಹಳ್ಳಿ ಠಾಣೆ ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ಆಗ ಆ ಮಹಿಳೆ ಎಲ್ಲಿ ತಂದಿರಿ ಎಂದಾಗ, ‘ಬಟ್ಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ತಂದಿದ್ದೇವೆ. ದುಡ್ಡು ಕೊಟ್ಟು ಏಕೆ ತರೋಣ. ಉಚಿತಾಗಿ ತಂದಿದ್ದೇವೆ. 15 ಕುರಿಯನ್ನೂ ತಿನ್ನುವುದಿಲ್ಲ. ಸಂತೆಯಲ್ಲಿ ಮಾರಾಟ ಮಾಡುತ್ತೇವೆ’ ಎಂದು ಪೊಲೀಸ್ ಸಿಬ್ಬಂದಿ ಹೇಳಿದ್ದಾರೆ.

ADVERTISEMENT

‘ಲೇಡಿಸ್ ಕಾನ್‌ಸ್ಟೆಬಲ್ ಯಾರಾದರೂ ಇದ್ದರೆ ನಿನ್ನ ನಗುವಿಗೆ ಬಿದ್ದೋಗುವರು’ ಎಂದು ಮಹಿಳೆ ಹೇಳಿದಾಗ, ‘ಎಲ್ಲರಿಗೂ ಮದುವೆ ಆಗಿದೆ. ಯಾರೂ ಬೀಳುವುದಿಲ್ಲ’ ಎಂದು ಸಿಬ್ಬಂದಿ ಹೇಳಿದ್ದಾರೆ. ‘ಬಾ ಮನೆಗೆ. ಮನೆಯವರು ಇಲ್ಲ’ ಎಂದು ಸಿಬ್ಬಂದಿ ಮಹಿಳೆಯನ್ನು ಕರೆದಿದ್ದಾರೆ.

18 ನಿಮಿಷಗಳ ಆಡಿಯೊದಲ್ಲಿ ಮಹಿಳೆ ಮತ್ತು ಸಿಬ್ಬಂದಿ ಪರಸ್ಪರ ಮುಕ್ತವಾಗಿ ಮಾತನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.