ADVERTISEMENT

ಗುಣಮಟ್ಟದ ಕಾಮಗಾರಿಗೆ ಶಾಸಕ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 5:41 IST
Last Updated 12 ಅಕ್ಟೋಬರ್ 2025, 5:41 IST
ಬಾಗೇಪಲ್ಲಿ ತಾಲ್ಲೂಕಿನ ಪೂಲವಾರಿಪಲ್ಲಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಮಿಪೂಜೆ ಮಾಡಿದರು
ಬಾಗೇಪಲ್ಲಿ ತಾಲ್ಲೂಕಿನ ಪೂಲವಾರಿಪಲ್ಲಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಮಿಪೂಜೆ ಮಾಡಿದರು   

ಬಾಗೇಪಲ್ಲಿ: ತಾಲ್ಲೂಕಿನ ಪೂಲವಾರಿಪಲ್ಲಿ ಕ್ರಾಸ್‍ನಿಂದ ಪೂಲವಾರಿಪಲ್ಲಿ ಗ್ರಾಮದವರಿಗೆ ₹84 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಶುಕ್ರವಾರ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಮಿಪೂಜೆ ಮಾಡಿದರು.

ಶಾಸಕ ಸುಬ್ಬಾರೆಡ್ಡಿ ಮಾತನಾಡಿ, ಪೂಲವಾರಿಪಲ್ಲಿ ಕ್ರಾಸ್‍ನಿಂದ ಗ್ರಾಮದವರೆಗೆ ರಸ್ತೆ ಕಾಮಗಾರಿ ಮಾಡಲಾಗುವುದು. ಮಾರ್ಗದ ಮಧ್ಯದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಇದೆ. ಪೋಷಕರು, ಮಕ್ಕಳು, ಗ್ರಾಮಸ್ಥರು ಓಡಾಡಲು ತೊಂದರೆ ಇದೆ. ಅನೇಕ ವರ್ಷಗಳಿಂದ ಗ್ರಾಮಸ್ಥರು ರಸ್ತೆ ಮಾಡಲು ಒತ್ತಾಯ ಮಾಡಿದ್ದಾರೆ. ರಸ್ತೆ ಕಾಮಗಾರಿ ಮಾಡಲಾಗುವುದು. ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.

ಸಂಜೀವರಾಯನಪಲ್ಲಿ ಗ್ರಾಮದಿಂದ ಪೂಲವಾರಿಪಲ್ಲಿ ಗ್ರಾಮಕ್ಕೆ ರಸ್ತೆ ಕಾಮಗಾರಿ ಮಾಡಿಸಲಾಗುವುದು. ಇದರಿಂದ ರಾಷ್ಟ್ರೀಯ ಹೆದ್ದಾರಿ ರಸ್ತೆ 44ರಿಂದ ಪೂಲವಾರಿಪಲ್ಲಿ ಗ್ರಾಮದ ಮೂಲಕ ಸಂಜೀವರಾಯನಪಲ್ಲಿ, ಹಂಪಸಂದ್ರಕ್ಕೆ ವಾಹನಗಳ ಹಾಗೂ ಜನರು ಸಂಚರಿಸಬಹುದು. ಗ್ರಾಮಗಳ ನಡುವೆ ಸಂಪರ್ಕ ರಸ್ತೆಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ. ಗ್ರಾಮದ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಲೋಕೊಪಯೋಗಿ ಇಲಾಖೆ ಎಇಇ ಅನಿಲ್, ಎಇ ಮಧು, ಕೆಡಿಪಿ ಸದಸ್ಯ ಮಂಜುನಾಥರೆಡ್ಡಿ, ಜಿಲ್ಲಾ ಸಹಕಾರ ಮಹಾಮಂಡಲದ ಎಚ್.ವಿ.ನಾಗರಾಜ್, ಮುಖಂಡ ಶಿವಪ್ಪ, ನಾಗರಾಜ್ ಗ್ರಾಮದ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.