
ಗುಡಿಬಂಡೆ: ಬಿರ್ಸಾ ಮುಂಡಾ ಜಾರ್ಖಂಡ್ ರಾಜ್ಯದಲ್ಲಿ ಬುಡಕಟ್ಟು ಜನಾಂಗದವರ ಮುಕ್ತಿಗಾಗಿ ಹೋರಾಟ ಮಾಡಿದವರು. ಜಾರ್ಖಂಡ್ ದೇಶದ ಬಡತನದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಕೆ.ಎಂ.ನಯಾಜ್ ಅಹ್ಮದ್ ಹೇಳಿದರು.
ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಕೆ.ಎಂ ನಯಾಜ್ ಅಹ್ಮದ್ ಅವರ ಬಿರ್ಸಾ ಮುಂಡಾರನ್ನು ಹುಡುಕುತ್ತಾ ಸಂಶೋಧನಾ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಮಹಾನ್ ನಾಯಕರನ್ನು ಹೆಚ್ಚು ಓದಿ ಅಧ್ಯಯನ ಮಾಡಿ ವಿಚಾರಗಳನ್ನು ತಿಳಿದುಕೊಳ್ಳುವಂತೆ ಆಗಬೇಕು ಎಂದು ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಮಂಜುನಾಥ, ಪ್ರಾಂಶುಪಾಲ ಅಬ್ಜಲ್ ಬಿಜಲಿ, ತಹಶೀಲ್ದಾರ್ ಸಿಗ್ಬತ್ ವುಲ್ಲಾ, ಇಒ ನಾಗಮಣಿ, ವೈ.ನಾರಾಯಣನ್, ಸಿಡಿಪಿಒ ರಫೀಕ್, ವಕೀಲ ಎಂ.ಜಿ ಸುಧಾಕರ್, ಮುನಿಕೃಷ್ಣ, ಚಿನ್ನ ಕೈವಾರಮ್ಯ, ಆದಿರೆಡ್ಡಿ, ಡಿ.ಎನ್ ಕೃಷ್ಣಾರೆಡ್ಡಿ, ಶಿವಪ್ಪ, ವೆಂಕಟಚಲಯ್ಯ, ಸನ ನಾಗೇಂದ್ರ, ಪ್ರಕಾಶ್, ಕೃಷ್ಣೇಗೌಡ, ಸುಲೇಮಾನ್, ಎಚ್.ಪಿ ಲಕ್ಷ್ಮಿನಾರಾಯಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.