ADVERTISEMENT

ಬೈಕ್‌ಗೆ ಕಾರು ಡಿಕ್ಕಿ: ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 3:14 IST
Last Updated 3 ನವೆಂಬರ್ 2025, 3:14 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಚಿಂತಾಮಣಿ: ಚಿಂತಾಮಣಿ–ಕೋಲಾರ ರಸ್ತೆಯ ಕುರುಟಹಳ್ಳಿ ಸಮೀಪ ಶುಕ್ರವಾರ ರಾತ್ರಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ADVERTISEMENT

ತಾಲ್ಲೂಕಿನ ಕಸಬಾ ಹೋಬಳಿಯ ಕಾಚಹಳ್ಳಿ ಗ್ರಾಮದ ಮೆಕಾನಿಕ್ ಸಾಧಿಕ್ ಪಾಷಾ (33) ಮೃತಪಟ್ಟವರು. ಕೋಲಾರ ರಸ್ತೆಯ ಕುರುಟಹಳ್ಳಿ ಮತ್ತು ಕಾಚಹಳ್ಳಿ ನಡುವೆ ಅಪಘಾತ ನಡೆದಿದೆ.

ಚಿಂತಾಮಣಿಯಿಂದ ತನ್ನ ಸ್ವಗ್ರಾಮ ಕಾಚಹಳ್ಳಿಗೆ ಹೋಗುತ್ತಿದ್ದ ಬೈಕ್‌ಗೆ ಕೋಲಾರದಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಬೈಕ್‌ನಿಂದ ಬಿದ್ದ ಸವಾರನಿಗೆ ತೀವ್ರ ಪೆಟ್ಟಾಗಿ, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಎರಡು ವಾಹನಗಳು ಸಂಪೂರ್ಣ ಜಖಂಗೊಂಡಿವೆ. 

ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.