ADVERTISEMENT

ಗೊಲ್ಲಪಲ್ಲಿ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದು

ಪಡಿತರ ಚೀಟಿದಾರರಿಂದ ಹಣ ವಸೂಲಿ ಆರೋಪ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 11:56 IST
Last Updated 10 ಏಪ್ರಿಲ್ 2020, 11:56 IST
ಪಡಿತರ ಚೀಟಿದಾರರಿಂದ ಅಕ್ರಮ ಹಣ ವಸೂಲಿ ಆರೋಪ ಹೊತ್ತಿರುವ ಗೊಲ್ಲಪಲ್ಲಿ ನ್ಯಾಯಬೆಲೆ ಅಂಗಡಿ
ಪಡಿತರ ಚೀಟಿದಾರರಿಂದ ಅಕ್ರಮ ಹಣ ವಸೂಲಿ ಆರೋಪ ಹೊತ್ತಿರುವ ಗೊಲ್ಲಪಲ್ಲಿ ನ್ಯಾಯಬೆಲೆ ಅಂಗಡಿ   

ಚೇಳೂರು: ಹೆಚ್ಚುವರಿ ಹಣ ಪಡೆದು ಪಡಿತರ ನೀಡಿದ ಆರೋಪದಲ್ಲಿ ಗೊಲ್ಲಪಲ್ಲಿ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ರದ್ದುಪಡಿಸಿದೆ.

ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಪಾಳ್ಯಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲಪಲ್ಲಿ ಗ್ರಾಮದ ಲಕ್ಷ್ಮೀಪತಿನಾಯ್ಕರ್ ನ್ಯಾಯಬೆಲೆ ಅಂಗಡಿ (ಸಂ.77) ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಎಂ.ಎನ್.ಲಕ್ಷ್ಮೀನರಸಮ್ಮ ನ್ಯಾಯಬೆಲೆ ಅಂಗಡಿ (ಸಂ.26) ಗಳಲ್ಲಿ ಪಡಿತರ ಚೀಟಿದಾರರಿಂದ ಅಕ್ರಮವಾಗಿ ₹ 10 ಮತ್ತು ₹20 ವಸೂಲಿ ಮಾಡುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ.

ಸರ್ಕಾರದ ಅನ್ನಭಾಗ್ಯ ಯೋಜನೆಯ ಸಾರ್ವಜನಿಕ ವಿತರಣಾ ಪದ್ಧತಿಯಡಿಯಲ್ಲಿ ಜಿಲ್ಲೆಯ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ರಮವಾಗಿ ಹಣ ವಸೂಲಿ ಮಾಡುವುದು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.