ADVERTISEMENT

ಚಿಕ್ಕಬಳ್ಳಾಪುರ: ಇಂದು ಉಚಿತ ಹೃದಯ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2025, 4:05 IST
Last Updated 15 ಫೆಬ್ರುವರಿ 2025, 4:05 IST
<div class="paragraphs"><p>ಹೃದಯ</p></div>

ಹೃದಯ

   

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದ ಸತ್ಯಸಾಯಿ ಸರಳಾ ಆಸ್ಪತ್ರೆಯಲ್ಲಿ ಫೆ.15 ರಂದು ಹೃದ್ರೋಗಗಳಿಗೆ ಸಂಬಂಧಿಸಿದ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಆಂಜಿಯೋಪ್ಲಾಸ್ಟಿ, ಆಂಜಿಯೋಗ್ರಾಮ್, ಮಕ್ಕಳ ಹೃದಯದ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗುತ್ತದೆ.

ಹೆಸರಾಂತ ‌ಹೃದ್ರೋಗ ತಜ್ಞರು ಮತ್ತು ಹೃದಯ ಶಸ್ತ್ರ ಚಿಕಿತ್ಸಕರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಚಿಕಿತ್ಸೆ ಅಗತ್ಯವಿರುವವರು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ 08516–275801 ಮತ್ತು ಸಂಜೆ
ನಾಲ್ಕು ಗಂಟೆ ನಂತರ 7483124299 ಸಂಪರ್ಕಿಸಿ ಹೆಸರು
ನೋಂದಾಯಿಸಿಕೊಳ್ಳಬೇಕು.

ADVERTISEMENT

ಸಮಾಲೋಚನೆ, ತಪಾಸಣೆ, ಚಿಕಿತ್ಸೆ ಮತ್ತು ಔಷಧೋಪಚಾರ ‌ಸಂಪೂರ್ಣ ಉಚಿತವಾಗಿರುತ್ತದೆ. ಅವಶ್ಯವುಳ್ಳವರು ಸೌಲಭ್ಯದ ಉಪಯೋಗ ಪಡೆಯಬೇಕು ಎಂದು ಆಸ್ಪತ್ರೆಯು ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.