
ಚಿಂತಾಮಣಿ: ಕೊಳವೆಬಾವಿ ಕೇಬಲ್ ಕಳ್ಳತನ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ತಾಲ್ಲೂಕಿನ ಕೆಂಚಾರ್ಲಹಳ್ಳಿ ಪೊಲೀಸರ ತಂಡವು ಮೂವರು ಆರೋಪಿಗಳನ್ನು ಬಂಧಿಸಿದೆ.
ಬಂಧಿತರಿಂದ ಕೊಳವೆಬಾವಿಗೆ ಅಳವಡಿಸುವ ಕೇಬಲ್ ಅನ್ನು ವಶಕ್ಕೆ ಪಡೆದಿದ್ದಾರೆ.
ಚಿಂತಾಮಣಿಯ ಶಾಂತಿ ನಗರದ ಗುಜರಿ ವ್ಯಾಪಾರಿ ಬಾಬೂಖಾನ್, ಮಹಬೂಬ್ ನಗರದ ಆಟೊ ಚಾಲಕ ಇಮ್ತಿಯಾಜ್ ಬೇಗ್, ಚೇಳೂರು ತಾಲ್ಲೂಕಿನ ನಿಮ್ಮಕಾಯಲಹಳ್ಳಿ ಕೂಲಿ ಕೆಲಸ ಮಾಡುವ ರಾಜಾ ಬಂಧಿತರು. ಬಂಧಿತರಿಂದ ₹23,400 ಮೊತ್ತದ 130 ಮೀಟರ್ ಕೇಬಲ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಂಚಾರ್ಲಹಳ್ಳಿ ಗ್ರಾಮದ 15 ರೈತರು ಕೊಳವೆಬಾವಿಗಳಿಗೆ ಅಳವಡಿಸಿದ್ದ ಕೇಬಲ್ ಕಳ್ಳತನವಾಗಿದೆ ಎಂದು ದೂರು ನೀಡಿದ್ದರು. ಆರೋಪಿಗಳು ಮತ್ತು ಮಾಲನ್ನು ಪತ್ತೆ ಮಾಡಲು ಕೆಂಚಾರ್ಲಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಜಿ.ಸಿ.ನಾರಾಯಣಸ್ವಾಮಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಅಪರಾಧ ಸಿಬ್ಬಂದಿ ನರಸಿಂಹಮೂರ್ತಿ, ವಿಜಯಕುಮಾರ್, ವಿಶ್ವನಾಥ್, ನಾರಾಯಣ್, ಸಿ.ಲೋಕೇಶ್ ರವರು ತಂಡದಲ್ಲಿದ್ದರು ಎಂದು ಕೆಂಚಾರ್ಲಹಳ್ಳಿ ಠಾಣೆ ನೀಡಿರುವ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.