ADVERTISEMENT

ಚಿಂತಾಮಣಿ: ಅಪಘಾತ; ಬೈಕ್‌ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 2:53 IST
Last Updated 8 ಸೆಪ್ಟೆಂಬರ್ 2025, 2:53 IST
ಸವಾರ ಪರ್ವೀಜ್‌ ಪಾಷಾ
ಸವಾರ ಪರ್ವೀಜ್‌ ಪಾಷಾ   

ಚಿಂತಾಮಣಿ: ಶಿಡ್ಲಘಟ್ಟ ರಸ್ತೆಯ ತಿಮ್ಮಸಂದ್ರದ ಬಳಿ ಶನಿವಾರ ತಡರಾತ್ರಿ ಗೂಡ್ಸ್‌ ವಾಹನ ಮತ್ತು ದ್ವಿಚಕ್ರವಾಹನ ಮುಖಾಮುಖಿ ಡಿಕ್ಕಿಯಾಗಿ ಗಾಯಗೊಂಡಿದ್ದ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಮೃತಪಟ್ಟ ವ್ಯಕ್ತಿಯನ್ನು ಶಿಡ್ಲಘಟ್ಟ ನಗರದ ವಾರ್ಡ್ ನಂ 18, ಅಜಾದ್ ನಗರದ ಪರ್ವೀಜ್ ಪಾಷಾ (25) ಎಂದು ಗುರುತಿಸಲಾಗಿದೆ.

ಪರ್ವೀಜ್ ಪಾಷಾ ಮುರುಗಮಲ್ಲ ಉರುಸ್ ಕಾರ್ಯಕ್ರಮ ಮುಗಿಸಿಕೊಂಡು ಬೈಕ್‌ನಲ್ಲಿ ಶಿಡ್ಲಘಟ್ಟಕ್ಕೆ ಹೋಗುತ್ತಿದ್ದರು. ಚಿಕ್ಕಬಳ್ಳಾಪುರ–ಶಿಡ್ಲಘಟ್ಟ ಕಡೆಯಿಂದ ಬರುತ್ತಿದ್ದ ಗೂಡ್ಸ್‌ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಕೆಳಗೆ ಬಿದ್ದು ಸವಾರ ಗಂಭೀರ ಗಾಯಗೊಂಡಿದ್ದರು.

ADVERTISEMENT

ದ್ವಿಚಕ್ರವಾಹನ ಸಂಪೂರ್ಣವಾಗಿ ಜಖಂಗೊಂಡಿದೆ. ಸ್ಥಳೀಯರು ಗಾಯಾಳುವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಿದ್ದರು. ಬೆಂಗಳೂರಿಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.