ADVERTISEMENT

ಚಿಂತಾಮಣಿ ಎಆರ್‌ಟಿಒಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 3:15 IST
Last Updated 12 ಫೆಬ್ರುವರಿ 2026, 3:15 IST
ಚಿಂತಾಮಣಿಯ ಎ.ಆರ್‌.ಟಿ.ಒ ಕಚೇರಿಗೆ ಅತ್ಯುತ್ತಮ ಜಾಗೃತಿ ಕಾರ್ಯಕ್ರಮದ ಆಯೋಜನಾ ಪ್ರಶಸ್ತಿ
ಚಿಂತಾಮಣಿಯ ಎ.ಆರ್‌.ಟಿ.ಒ ಕಚೇರಿಗೆ ಅತ್ಯುತ್ತಮ ಜಾಗೃತಿ ಕಾರ್ಯಕ್ರಮದ ಆಯೋಜನಾ ಪ್ರಶಸ್ತಿ   

ಚಿಂತಾಮಣಿ: ರಸ್ತೆ ಸುರಕ್ಷತೆಯ ಮಾಸಾಚರಣೆ ಮೂಲಕ ಜನರು ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಿದ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಇಲಾಖೆಯಿಂದ ಚಿಂತಾಮಣಿ ಎಆರ್‌ಟಿಒ ಕಚೇರಿಗೆ ಅತ್ಯುತ್ತಮ ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಪ್ರಶಸ್ತಿ ನೀಡಲಾಗಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಚಿಂತಾಮಣಿ ಎಆರ್‌ಟಿಒ ಕಚೇರಿ ಸಹಾಯಕ ಸಾರಿಗೆ ಅಧಿಕಾರಿ ಬೈರಾರೆಡ್ಡಿ, ಕಚೇರಿ ಅಧೀಕ್ಷಕ ಸಿ. ದೇವರಾಜ್ ಹಾಗೂ ಸಿಬ್ಬಂದಿ ಪ್ರಶಸ್ತಿ ಸ್ವೀಕರಿಸಿದರು. 

ತಾಲ್ಲೂಕಿನ ಕಾನೂನು ಸೇವಾ ಸಮಿತಿ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಜನವರಿಯಲ್ಲಿ ಒಂದು ತಿಂಗಳು ಚಿಂತಾಮಣಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚಾರಣೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.