ಚಿಂತಾಮಣಿ: ತಾಲ್ಲೂಕಿನ ಮೈಲಾಪುರದಲ್ಲಿ ಸೋಮವಾರ ಹಾಡು ಹಗಲಲ್ಲೇ ಕೇಬಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಸಾರ್ವಜನಿಕರೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ನಗರದ ನರಸಿಂಹ ಮತ್ತು ಸೈಫುಲ್ಲಾ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿ ಆರೋಪಿಗಳು.
ಗ್ರಾಮಸ್ಥರು ಸಹ ಕೇಬಲ್ ಕಳ್ಳರನ್ನು ಹಿಡಿಯಲು ಹೊಂಚು ಹಾಕಿ ಕಾಯುತ್ತಿದ್ದರು. ಸೋಮವಾರ ಗ್ರಾಮದ ಮಂಜುನಾಥಗೌಡರ 2 ಕೊಳವೆ ಬಾವಿ, ಆನಂದ, ವೆಂಕಟೇಶಗೌಡ, ಹಾಗೂ ಗ್ರಾಮದ ಸಾರ್ವಜನಿಕ ಕೊಳವೆ ಬಾವಿ ಸೇರಿ ಒಟ್ಟು ಐದು ಕೊಳವೆ ಬಾವಿಗಳ ಕೇಬಲ್ ಕದ್ದಿರುವ ಕಳ್ಳರು ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ.
ಗ್ರಾಮಸ್ಥರು 112 ಪೊಲೀಸರ ಮೂಲಕ ಆರೋಪಿಗಳನ್ನು ಗ್ರಾಮಾಂತರ ಠಾಣೆ ಗೆ ಒಪ್ಪಿಸಿ ದೂರು ನೀಡಿದ್ದಾರೆ. ಪೊಲೀಸರು ದೂರನ್ನು ದಾಖಲಿಸಿಕೊಂಡು ಮುಂದಿಒನ ಕ್ರಮಕೈಗೊಂಡಿದ್ದಾರೆ.
ಮೈಲಾಪುರ ಹಾಗೂ ಸುತ್ತಮುತ್ತಲ ಗ್ರಾಮಗಳ ಕೊಳವೆ ಬಾವಿಗಳ ಕೇಬಲ್ ಕಳ್ಳತನ ಮಾಡುತ್ತಿದ್ದ ಪ್ರಕರಣಗಳು ಸುಮಾರು ಒಂದು ವರ್ಷದಿಂದ ನಡೆಯುತ್ತಿದ್ದವು. ಅನೇಕ ಬಾರಿ ಪೊಲೀಸರಿಗೆ ದೂರು ನೀಡಲಾಗಿತ್ತು ಎಂದು ಸ್ಥಳೀಯ ಮಂಜುನಾಥಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.