ADVERTISEMENT

ಮಾರ್ಚ್ 8ರಂದು ಕೋಟಗಲ್ ದನಗಳ ಜಾತ್ರೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 3:09 IST
Last Updated 28 ಫೆಬ್ರುವರಿ 2026, 3:09 IST
ಚಿಂತಾಮಣಿ ತಾಲ್ಲೂಕಿನ ಕೋಟಗಲ್‌ ದನಗಳ ಜಾತ್ರೆ –ಸಂಗ್ರಹ ಚಿತ್ರ
ಚಿಂತಾಮಣಿ ತಾಲ್ಲೂಕಿನ ಕೋಟಗಲ್‌ ದನಗಳ ಜಾತ್ರೆ –ಸಂಗ್ರಹ ಚಿತ್ರ   

ಚಿಂತಾಮಣಿ: ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ಕೋಟಗಲ್ ಶಿಂಗರೇಪಲ್ಲಿ ಮಜರಾ ಕೆ. ರಾಗುಟ್ಟಹಳ್ಳಿಯ ಖಾದ್ರಿ ಲಕ್ಷ್ಮಿನರಸಿಂಹ ರಥೋತ್ಸವವು ಮಾರ್ಚ್ 8ರಂದು ನಡೆಯಲಿದೆ. ರಥೋತ್ಸವದ ಪೂಜಾಕೈಂಕರ್ಯಗಳು ಶುಕ್ರವಾರದಿಂದ ಆರಂಭವಾಗಿದ್ದು, ಮಾರ್ಚ್ 11ರವರೆಗೆ ಮುಂದುವರಿಯಲಿವೆ.

ಜಾತ್ರೆ ಸಮಯದಲ್ಲಿ ಪ್ರತಿನಿತ್ಯ ದೇವರಿಗೆ ವಿಶೇಷ ಹೂವಿನ ಅಲಂಕಾರಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಪೂಜಾ ಕೈಂಕರ್ಯಗಳು ನೆರವೇರಲಿವೆ.

ರಥೋತ್ಸವಕ್ಕೆ ಕರ್ನಾಟಕದ ವಿವಿಧ ಭಾಗಗಳಿಂದಷ್ಟೇ ಅಲ್ಲದೆ, ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ವಿವಿಧ ಭಾಗಗಳಿಂದ ದನಗಳು ಮತ್ತು ವ್ಯಾಪಾರಸ್ಥರು ಬರಲಿದ್ದಾರೆ. ರಾಸುಗಳಿಗೆ ನೀರಿನ ಸೌಕರ್ಯ ಕಲ್ಪಿಸಲಾಗಿದೆ. ವಿದ್ಯುತ್ ಶಕ್ತಿ, ಪೊಲೀಸ್ ಬಂದೋಬಸ್ತ್‌ನೊಂದಿಗೆ ಪಶು ವೈದ್ಯಕೀಯ ಚಿಕಿತ್ಸೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಮಾರ್ಚ್ 1ರಿಂದ ಜಾತ್ರೆಗೆ ದನಗಳು ಬರಲಿವೆ. 

ADVERTISEMENT

ಜಾತ್ರೆಯಲ್ಲಿ ಮನರಂಜನೆಗೆ ನಾಟಕ, ಕೋಲಾಟ, ಪಂಡರಿ ಭಜನೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.