ADVERTISEMENT

ಚಿಂತಾಮಣಿ | ಸಮೀಕ್ಷೆ ಮಾಡುತ್ತಿದ್ದ ಶಿಕ್ಷಕ ಸಾವು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 19:31 IST
Last Updated 29 ಸೆಪ್ಟೆಂಬರ್ 2025, 19:31 IST
ವೈ.ವಿ. ರಾಮಕೃಷ್ಣ
ವೈ.ವಿ. ರಾಮಕೃಷ್ಣ   

ಚಿಂತಾಮಣಿ: ಪಟ್ಟಣದಲ್ಲಿ ಭಾನುವಾರ ಸಂಜೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದ ಶಿಕ್ಷಕರೊಬ್ಬರು ಸಮೀಕ್ಷೆ ನಡೆಸುತ್ತಿರುವಾಗಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಯಗವಕೋಟೆ ಕ್ಲಸ್ಟರ್ ವ್ಯಾಪ್ತಿಯ ದಿಗವಕೋಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೈ.ವಿ.ರಾಮಕೃಷ್ಣ (58) ಮೃತ ಶಿಕ್ಷಕ. ಪತ್ನಿ, ಪುತ್ರ ಇದ್ದಾರೆ. ಸೋಮವಾರ ಅಂತ್ಯಕ್ರಿಯೆ ನಡೆಯಿತು.

ನಿವೃತ್ತಿಯ ಅಂಚಿನಲ್ಲಿದ್ದ ರಾಮಕೃಷ್ಣ ಭಾನುವಾರ ಮಧ್ಯಾಹ್ನದವರೆಗೂ ಮತ್ತೊಬ್ಬ ಶಿಕ್ಷಕರ ನೆರವಿನಲ್ಲಿ ಸಮೀಕ್ಷೆ ನಡೆಸಿದ್ದಾರೆ. ಎದೆನೋವು ಕಾಣಿಸಿದ್ದರಿಂದ ಖಾಸಗಿ ವೈದ್ಯರಿಂದ ತಪಾಸಣೆಗೆ ಮಾಡಿಸಿಕೊಂಡಿದ್ದು, ಬಳಿಕ ಡೆಕ್ಕನ್ ಆಸ್ಪತ್ರೆಗೆ ತೆರಳಿದ್ದರು. ವೈದ್ಯರು ಪರೀಕ್ಷಿಸುವ ಮೊದಲೇ  ಮೃತಪಟ್ಟಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.