ADVERTISEMENT

ಚಿಂತಾಮಣಿ | ಕಳ್ಳತನ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 4:58 IST
Last Updated 25 ಜುಲೈ 2025, 4:58 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ಚಿಂತಾಮಣಿ: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ನಗದು ಮತ್ತು ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

ADVERTISEMENT

ತಮಿಳುನಾಡು ಮೂಲದ ಜಗನ್, ಇಲ್ಲಿನ ಶಾಂತಿನಗರದ ಸಾದಿಕ್ ಪಾಷಾ ಹಾಗೂ ಅಗ್ರಹಾರದ ಟಿಪ್ಪು ಬೇಗ್ ಬಂಧಿತರು. 

ಬಂಧಿತರಿಂದ ₹2.55 ಲಕ್ಷ ಮೌಲ್ಯದ 41 ಗ್ರಾಂ ಚಿನ್ನಾಭರಣಗಳು, ₹1.74 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಜೂನ್‌ 26ರಂದು ನಗರದ ಶಾಂತಿನಗರದಲ್ಲಿ ಕಳ್ಳತನ ನಡೆದಿತ್ತು. ಡಿವೈಎಸ್‌ಪಿ ಪಿ. ಮುರಳೀಧರ್‌ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಗಾಗಿ ನಗರ ಠಾಣೆ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ಸಿ.ಸಿ.ಟಿ.ವಿ ಕ್ಯಾಮೆರಾಗಳ ಪರಿಶೀಲನೆಯಿಂದ ಆರೋಪಿಗಳ ಸುಳಿವು ಪತ್ತೆಯಾಗಿತ್ತು. 

ಪಿಎಸ್‌ಐ ಪ್ರಕಾಶ್‌, ಸಿಬ್ಬಂದಿ ಜಗದೀಶ್‌, ಮಂಜುನಾಥ್‌, ಶ್ರೀನಿವಾಸಮೂರ್ತಿ, ಲೋಕೇಶ್‌, ಸಿದ್ದರೂಡ, ಅನಿಲ್‌, ಸುರೇಶ್‌ ವಿಶೇಷ ಪತ್ತೆದಾರಿ ತಂಡದಲ್ಲಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.