ADVERTISEMENT

ಚಿಕ್ಕಬಳ್ಳಾಪುರ: ಮರುಳಸಿದ್ದೇಶ್ವರ ದೇಗುಲ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 4:03 IST
Last Updated 4 ಅಕ್ಟೋಬರ್ 2021, 4:03 IST
ಹಸಿರು ತಂಡ ಸದಸ್ಯರು ಮರುಳಸಿದ್ದೇಶ್ವರ ದೇಗುಲದ ಆವರಣ ಸ್ವಚ್ಛಗೊಳಿಸಿದರು
ಹಸಿರು ತಂಡ ಸದಸ್ಯರು ಮರುಳಸಿದ್ದೇಶ್ವರ ದೇಗುಲದ ಆವರಣ ಸ್ವಚ್ಛಗೊಳಿಸಿದರು   

ಚಿಕ್ಕಬಳ್ಳಾಪುರ: ನಗರದ ಮರುಳ ಸಿದ್ದೇಶ್ವರ ದೇವಾಲಯದ ಆವರಣ ವನ್ನು ನಗರಸಭೆ ಹಾಗೂ ಹಸಿರು ತಂಡದ ಸದಸ್ಯರು ಭಾನುವಾರ ಸ್ವಚ್ಛಗೊಳಿಸಿದರು.

ನಗರಸಭೆ ಆರೋಗ್ಯ ಅಧಿಕಾರಿ ಶ್ರೀನಾಥ್ ಮಾತನಾಡಿ, ದೇವರ ಮೇಲೆ ಭಕ್ತರಿಗೆ ಅಪಾರ ಭಕ್ತಿ ಇರುತ್ತದೆ. ಅಷ್ಟೇ ಭಕ್ತಿಯನ್ನು ಪರಿಸರ ಮೇಲೂ ಹೊಂದಿರಬೇಕು. ದೇವಾಲಯ ಸೇರಿದಂತೆ ಎಲ್ಲಿಯೂ ಪ್ಲಾಸ್ಟಿಕ್‌ ಅನ್ನು ಎಸೆಯಬೇಡಿ ಎಂದು ಹೇಳಿದರು.

ದೇವಾಲಯದ ಆವರಣ ಸ್ವಚ್ಛವಾಗಿದ್ದರೆ ಅದು ಸುಂದರವಾಗಿ ಕಾಣುತ್ತದೆ. ಭಕ್ತರ ಮನಸ್ಸು ಸಹ ಉತ್ತಮ ವಾತಾವರಣ ದಿಂದ ಪ್ರಸನ್ನತೆಯನ್ನು ಪಡೆಯುತ್ತದೆ ಎಂದರು.

ADVERTISEMENT

ಪ್ಲಾಸ್ಟಿಕ್ ತ್ಯಾಜ್ಯ, ಕಳೆ ಗಿಡಗಳನ್ನು ತೆರವುಗೊಳಿಸಲಾಯಿತು. ಪಾಪಣ್ಣ, ಶಿಕ್ಷಕ ಮಹಾಂತೇಶ್, ಕಿರುಚಿತ್ರ ನಿರ್ದೇಶಕ ಮಹಾನ್, ಹರ್ಷ, ಕಿಶೋರ್, ಸಂತೋಷ್, ಅಬುಬಕರ್, ಶಿವಕುಮಾರ್, ಅನಿಲ್, ಜಯದೇವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.