ಗೌರಿಬಿದನೂರು: ಗ್ರಾಮೀಣ ನೀರು ಮತ್ತು ನೈರ್ಮಲ್ಯ ಎಂಜಿನಿಯರ್ ಆಂಜಿನೇಯ ಮೂರ್ತಿ ಅವರ ಕಚೇರಿ ಹಾಗೂ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದಾಗ ₹5 ಕೋಟಿಗೂ ಹೆಚ್ಚು ಆಸ್ತಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಅವರನ್ನು ಸನ್ಮಾನಿಸಲು, ನಗರದ ಪ್ರವಾಸಿ ಮಂದಿರದಿಂದ ಆಂಜಿನೇಯ ಮೂರ್ತಿ ಭಾವಚಿತ್ರವನ್ನು ಹಿಡಿದುಕೊಂಡು, ಕಾಲ್ನಡಿಗೆ ಜಾಥಾ ಮೂಲಕ ಕಚೇರಿಗೆ ಸಾಗಿದರು.
ಕಚೇರಿಯಲ್ಲಿ ಎಂಜಿನಿಯರ್ ಆಂಜಿನೇಯ ಮೂರ್ತಿ ಇರಲಿಲ್ಲ. ಅವರು ಕಾರ್ಯನಿರ್ವಹಿಸುವ ಕುರ್ಚಿಗೆ ಭಾವಚಿತ್ರವನ್ನು ಇಟ್ಟು ಪೇಟ, ಹೂವಿನ ಹಾರಹಾಕಿ ಸನ್ಮಾನ ಮಾಡಿದರು.
ಪಕ್ಷದ ಉಪಾಧ್ಯಕ್ಷ ಜಾಣಗೆರೆ ರವಿ ಮಾತನಾಡಿ, ಭ್ರಷ್ಟ ಅಧಿಕಾರಿಗಳಿಗೆ ಯಾರ ಭಯವು ಇಲ್ಲದೇ ಬೇಕಾಬಿಟ್ಟಿಯಾಗಿ ಹಣ ಮಾಡುವ ದಂದೆಯಲ್ಲಿ ತೊಡಗಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳಿಗೆ ಬುದ್ದಿ ಕಲಿಸಲು ಈ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ರಘು ಜಾಣಗೆರೆ, ಜಿಲ್ಲಾ ಉಸ್ತುವಾರಿ ಶ್ರೀನಿವಾಸ್, ಜಿಲ್ಲಾ ಸಮಿತಿ ಅಧ್ಯಕ್ಷ ಡೇನಿಯಲ್, ತಾಲ್ಲೂಕು ಘಟಕದ ಅಧ್ಯಕ್ಷರ ರಂಗನಹಳ್ಳಿ ರಾಜಕುಮಾರ ನಾಯ್ಕ, ಆರೋಗ್ಯ ಸ್ವಾಮಿ, ತಿಪ್ಪಣ್ಣ, ಸಂತೋಷ್, ನಂಜುಂಡಪ್ಪ, ವಿಜಯ್ ಕುಮಾರ್, ಮಹಮದ್ ನಾರಾಯಣಸ್ವಾಮಿ, ಬಾಗೇಪಲ್ಲಿ ಮತ್ತು ಶಿಡ್ಲಘಟ್ಟ ಪದಾಧಿಕಾರಿಗಳು ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.