ADVERTISEMENT

ಸಿಪಿಎಂ‌ ಸೋತಿದೆಯಷ್ಟೇ ಸತ್ತಿಲ್ಲ: ಎಂ.ಪಿ.ಮುನಿವೆಂಕಟಪ್ಪ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 5:51 IST
Last Updated 27 ಡಿಸೆಂಬರ್ 2025, 5:51 IST
ಸಿಪಿಎಂ
ಸಿಪಿಎಂ   

ಬಾಗೇಪಲ್ಲಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ಪಕ್ಷ ಸೋತಿದೆ. ಆದರೆ, ಕ್ಷೇತ್ರದಲ್ಲಿ ಸಿಪಿಎಂ‌ ಸತ್ತಿಲ್ಲ. ಜನರ ಬಲಿಷ್ಠ ಸಂಘಟನೆಯಿಂದ ಮುಂದೊಮ್ಮೆ ಸಿಪಿಎಂ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಈ ಮೂಲಕ ಜನರ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಲಾಗುವುದು ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಲಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ತಿಳಿಸಿದರು.

ಪಟ್ಟಣದ ಸುಂದರಯ್ಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕ್ಷೇತ್ರದಲ್ಲಿ ಸಿಪಿಎಂ ಹಲವಾರು ಕಾರಣಗಳಿಂದ‌ ಸೋತಿದೆ. ಜನಸಾಮಾನ್ಯರು, ಕೃಷಿಕೂಲಿಕಾರ್ಮಿಕರು ಇರುವವರೆಗೆ ಕೆಂಬಾವುಟದ ಮೂಲಕ ಜನರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ಮಾಡಲಿದೆ. ಕ್ಷೇತ್ರದಲ್ಲಿ ಸಿಪಿಎಂ‌ ಇಲ್ಲ ಎನ್ನುವವರಿಗೆ ಮುಂದಿನ‌‌ ದಿನಗಳಲ್ಲಿ ತಿಳಿಯಲಿದೆ ಎಂದರು.

ADVERTISEMENT

ರಾಜ್ಯ ಮತ್ತು ಕ್ಷೇತ್ರದಲ್ಲಿ ಸಿಪಿಎಂ ಪಕ್ಷ ಪರ್ಯಾಯ ರಾಜಕೀಯ ಮತ್ತು ಜನರ‌ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಲು ನ. 1ರಿಂದ ಡಿ. 15ರವರೆಗೆ ಮನೆ ಮನೆಗೆ ಭೇಟಿ ನೀಡಲಾಗಿದೆ. ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ತಾಲ್ಲೂಕುಗಳ 7 ಜಿಲ್ಲಾ ಪಂಚಾತಿಗಳಲ್ಲಿ, 19 ತಾಲ್ಲೂಕು ಪಂಚಾಯಿತಿಗಳ 12,111 ಮನೆಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಸಂಗ್ರಹಿಸಿದ್ದೇವೆ ಎಂದರು .

ಸಿಪಿಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಬಿಳ್ಳೂರು ನಾಗರಾಜ್, ಅಶ್ವತ್ಥಪ್ಪ, ಎಂ.ಎನ್.ರಘುರಾಮರೆಡ್ಡಿ, ಚನ್ನರಾಯಪ್ಪ, ಟೌನ್ ಕೃಷ್ಣಪ್ಪ, ಮುಸ್ತಾಫ, ಚಂಚುರಾಯನಪಲ್ಲಿ ಕೃಷ್ಣಪ್ಪ, ಕೆ.ಮುನಿಯಪ್ಪ, ಬಿ.ಎಚ್.ರಫೀಕ್, ಎ.ಸೋಮಶೇಖರ, ಇಮ್ರಾನ್, ರವಣಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.