ADVERTISEMENT

ಮನೆಯಲ್ಲಿಯೇ ಕುಳಿತು ಕೆಲಸದ ಆಮಿಷ: ಟಾಸ್ಕ್ ನೀಡಿ ₹10 ಲಕ್ಷ ದೋಚಿದ ವಂಚಕರು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2023, 14:10 IST
Last Updated 16 ಡಿಸೆಂಬರ್ 2023, 14:10 IST
ವಂಚನೆ
ವಂಚನೆ   

ಸಾಂದರ್ಭಿಕ ಚಿತ್ರ

ಚಿಂತಾಮಣಿ: ಮನೆಯಲ್ಲಿಯೇ ಕುಳಿತು ಬಿಡುವಿನ ವೇಳೆಯಲ್ಲಿ ಕೆಲಸ ಮಾಡಿ ದಿನನಿತ್ಯ ₹2 ಸಾವಿರ ಸಂಪಾದನೆ ಮಾಡಬಹುದು ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ₹10.34 ಲಕ್ಷ ವಂಚಿಸಿರುವುದಾಗಿ ಸಿಇಎನ್ ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಲಾಗಿದೆ.

ಚಿಂತಾಮಣಿ ತಾಲ್ಲೂಕಿನ ವೆಂಕಟರಾಯನಕೋಟೆ ಗ್ರಾಮದ ವಿ.ಆರ್.ಮೋಹನ್ ಬಾಬು ವಂಚಕರ ಮೋಸಕ್ಕೆ ಬಲಿಯಾಗಿ ಹಣ ಕಳೆದುಕೊಂಡು ದೂರು ನೀಡಿರುವ ವ್ಯಕ್ತಿ.

ADVERTISEMENT

ಜೂನ್ 19 ರಂದು ಶೈಲಲಕ್ಷೀ ಎಂಬುವವರು ಟೆಲಿಗ್ರಾಂ ಮೂಲಕ ಮೋಹನ್ಬಾಬು ಮೊಬೈಲ್‌ಗೆ ಮೆಸೇಜ್ಮಾಡಿಪಾರ್ಟ್ಟೈಂ ಜಾಬ್‌ನಲ್ಲಿ ಪ್ರತಿನಿತ್ಯ ₹2 ಸಾವಿರ ಸಂಪಾದನೆ ಮಾಡಬಹುದು ಎಂದು ತಿಳಿಸಿದ್ದಾರೆ. ನಂತರ ಅದೇ ಅಪ್ಲಿಕೇಷನ್ ಮೂಲಕ ಗೋಗುಲ್ ಎಂಬುವವರು ಮೆಸೇಜ್ಮಾಡಿಯೂಬರ್ಈಟ್ಸ್ ಎಂಬ ಆ‍್ಯಪ್‌ನಲ್ಲಿ ಫುಡ್ ಆರ್ಡರ್ ಮಾಡಿದರೆ ₹30 ರಿಂದ ₹400 ಕಮಿಷನ್ ಜಮಾ ಆಗುತ್ತದೆ ಎಂದು ನಂಬಿಕೆ ಬರುವಂತೆ ತಿಳಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಟಾಸ್ಕ್ ಕೊಟ್ಟು ₹12,315 ಜಮಾ ಮಾಡಿದ್ದರು. ಖಾತೆಗೆ ವರ್ಗಾವಣೆ ಮಾಡಬೇಕಾದರೆ ₹9 ಸಾವಿರ ರೀಚಾರ್ಜ್ ಮಾಡಬೇಕು ಎಂದು ಸೂಚಿಸಿದರು. ಅವರ ಎಸ್‌ಬಿಐ ಬ್ಯಾಂಕಿನ ಖಾತೆಯಿಂದ ₹9 ಸಾವಿರ ವರ್ಗಾವಣೆ ಮಾಡಿದ್ದಾರೆ. ಜೂನ್ 22 ರಂದು ₹12,315ನ್ನು ಮೋಹನ್ ಬಾಬು ಖಾತೆಗೆ ವರ್ಗಾವಣೆ ಮಾಡಿದ್ದಾರೆ.

ಅದೇ ದಿನ ಮತ್ತೆ ₹11 ಸಾವಿರ ಕೊಡಲು ಸೂಚಿಸಿದರು. ಎಸ್‌ಬಿಐ ಖಾತೆಯಿಂದಲೇ ₹11 ಸಾವಿರ ವರ್ಗಾವಣೆ ಮಾಡಿದ್ದಾರೆ. ನಂತರ ₹3,360ನ್ನು ಬಾಬು ಖಾತೆಗೆ ಜಮಾ ಮಾಡಿದ್ದಾರೆ.

ಹೀಗೆ ವಿವಿಧ ದಿನಗಳಲ್ಲಿ ಟಾಸ್ಕ್‌ ಹೆಸರಿನಲ್ಲಿ ಒಟ್ಟು ₹10,34,052 ಕಟ್ಟಿಸಿಕೊಂಡಿದ್ದಾರೆ. ನಂಬಿಕೆ ಕಳೆದುಕೊಂಡು ಅನುಮಾನದಿಂದ 1930ಕ್ಕೆ ಕರೆ ಮಾಡಿ ಮಾಹಿತಿ ತಿಳಿಸಿ ಪ್ರಕರಣ ದಾಖಲಿಸಿದ್ದೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.