ADVERTISEMENT

ಸೈಬರ್ ವಂಚನೆ: ಪೊಲೀಸರಿಂದ ಅರಿವು

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 16:23 IST
Last Updated 9 ಜೂನ್ 2025, 16:23 IST
ಶಿಡ್ಲಘಟ್ಟ ತಾಲ್ಲೂಕು ದಿಬ್ಬೂರಹಳ್ಳಿ ಕೆನರಾ ಬ್ಯಾಂಕ್‌ನಲ್ಲಿ ದಿಬ್ಬೂರಹಳ್ಳಿ ಠಾಣೆ ತನಿಖಾಧಿಕಾರಿ ಟಿ.ವೆಂಕಟರಮಣ ಅವರು ಗ್ರಾಹಕರಿಗೆ ಸೈಬರ್ ವಂಚನೆಗಳ ಬಗ್ಗೆ ಅರಿವು ಮೂಡಿಸಿದರು
ಶಿಡ್ಲಘಟ್ಟ ತಾಲ್ಲೂಕು ದಿಬ್ಬೂರಹಳ್ಳಿ ಕೆನರಾ ಬ್ಯಾಂಕ್‌ನಲ್ಲಿ ದಿಬ್ಬೂರಹಳ್ಳಿ ಠಾಣೆ ತನಿಖಾಧಿಕಾರಿ ಟಿ.ವೆಂಕಟರಮಣ ಅವರು ಗ್ರಾಹಕರಿಗೆ ಸೈಬರ್ ವಂಚನೆಗಳ ಬಗ್ಗೆ ಅರಿವು ಮೂಡಿಸಿದರು   

ಶಿಡ್ಲಘಟ್ಟ: ಬ್ಯಾಂಕ್‌ನ ಅಧಿಕಾರಿ, ಸಿಬ್ಬಂದಿ ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಖಾತೆಯ ವಿವರ ಕೇಳಲು ಮೊಬೈಲ್ ಕರೆ ಮಾಡುವುದಿಲ್ಲ. ಒಟಿಪಿ ಸಂಖ್ಯೆಯನ್ನಾಗಲಿ ಕೇಳುವುದಿಲ್ಲ. ಯಾರಿಗೂ ಬ್ಯಾಂಕ್ ಖಾತೆಯ ಮಾಹಿತಿ ಕೊಡಬೇಡಿ ಎಂದು ದಿಬ್ಬೂರಹಳ್ಳಿ ಠಾಣೆ ತನಿಖಾಧಿಕಾರಿ ಟಿ.ವೆಂಕಟರಮಣ ಸಾರ್ವಜನಿಕರಿಗೆ ತಿಳಿಸಿದರು.

ದಿಬ್ಬೂರಹಳ್ಳಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸೋಮವಾರ ಗ್ರಾಹಕರಿಗೆ ಸೈಬರ್ ಅಪರಾಧ ಹಾಗೂ ವಂಚನೆಗಳ ಬಗ್ಗೆ ಅರಿವು ಮೂಡಿಸಿದರು.

ನಿಮ್ಮ ಖಾತೆ ಬ್ಲಾಕ್ ಆಗಿದೆ. ಎಟಿಎಂ ಕಾರ್ಡ್ ಅವಧಿ ಮುಗಿದಿದೆ ಎಂದೆಲ್ಲಾ ಕರೆ ಬಂದರೆ ಅದನ್ನು ನಂಬಬೇಡಿ ಎಂದರು.

ADVERTISEMENT

ಗ್ರಾಮೀಣ ಭಾಗದಲ್ಲಿ ಓದಲು ಬರೆಯಲು ಬಾರದವರನ್ನು ವಂಚಿಸುವವರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅಂತಹ ಖದೀಮರು ಬ್ಯಾಂಕ್ ಬಳಿ ತಿರುಗಾಡುತ್ತಾ ಅನಕ್ಷರಸ್ಥರು ಮತ್ತು ಅಮಾಯಕರು ಬಂದಾಗ ನಿಮಗೆ ಚೆಕ್ ಬರೆದುಕೊಟ್ಟು ಹಣ ಡ್ರಾ ಮಾಡಿ ಕೊಟ್ಟು ಸಹಾಯ ಮಾಡುವವರಂತೆ ನಟಿಸುತ್ತಾರೆ.

ಚಿನ್ನಾಭರಣ ಅಡವಿಡುವ ಸಮಯದಲ್ಲೂ ನಿಮಗೆ ಸಹಾಯ ಮಾಡುವಂತೆ ನಟಿಸಿ ಚಿನ್ನಾಭರಣವನ್ನು ಅದಲು ಬದಲು ಮಾಡಿ ಮೋಸ ಮಾಡುತ್ತಾರೆ. ಹಾಗಾಗಿ ಬ್ಯಾಂಕ್ ಬಳಿ ನಿಮಗೆ ಪರಿಚಯ ಇಲ್ಲದವರ ಬಳಿ ಯಾವುದೇ ಕಾರಣಕ್ಕೂ ಹಣ ಡ್ರಾ ಮಾಡಿಸಿಕೊಡುವಂತೆ, ಚಿನ್ನಾಭರಣ ಅಡ ಇಟ್ಟು ಹಣ ಕೊಡಿಸುವಂತೆ ಕೇಳಿ ಮೋಸ ಹೋಗಬೇಡಿ ಎಂದರು.

ಅಪರಾಧ ವಿಭಾಗದ ಕೃಷ್ಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.