ADVERTISEMENT

ಪೊಲೀಸ್ ಅಧಿಕಾರಿ ದಯಾ ನಾಯಕ್ ಹೆಸರಿನಲ್ಲಿ ಸೈಬರ್ ವಂಚನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 0:21 IST
Last Updated 18 ಜುಲೈ 2025, 0:21 IST
<div class="paragraphs"><p>ಸೈಬರ್ ವಂಚನೆ</p></div>

ಸೈಬರ್ ವಂಚನೆ

   

ಚಿಕ್ಕಬಳ್ಳಾಪುರ: ಎನ್‌ಕೌಂಟರ್ ಕಾರಣಕ್ಕೆ ಪ್ರಸಿದ್ಧರಾದ ಪೊಲೀಸ್ ಅಧಿಕಾರಿ ದಯಾ ನಾಯಕ್ ಅವರ ಹೆಸರು ಹೇಳಿ ತಾಲ್ಲೂಕಿನ ಸಬ್ಬೇನಹಳ್ಳಿಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿವೃತ್ತ ಹಿರಿಯ ಭೂ ವಿಜ್ಞಾನಿ ಬಿ.ಕೆ. ರಾಮಚಂದ್ರಪ್ಪ  ಹಾಗೂ ಇವರ ಪತ್ನಿ ಸುಜಾತ ಅವರಿಗೆ ಸೈಬರ್ ವಂಚಕರು ₹ 12.65 ಲಕ್ಷ ವಂಚಿಸಿದ್ದಾರೆ.

ಈ ಸಂಬಂಧ ಅವರು ಚಿಕ್ಕಬಳ್ಳಾಪುರ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

ದಂಪತಿಗೆ ಕರೆ ಮಾಡಿರುವ ಸೈಬರ್ ವಂಚಕರು, ‘ಮುಂಬೈನ ಕೆನರಾ ಬ್ಯಾಂಕಿನಲ್ಲಿ ನಿಮ್ಮ ಹೆಸರಿನ ಖಾತೆ ಇದೆ. ಕೆಲವರು ನಿಮ್ಮ ಖಾತೆಯನ್ನು ಹಣ ಅಕ್ರಮ ವರ್ಗಾವಣೆಗೆ ಬಳಸಿಕೊಂಡಿದ್ದಾರೆ. ಈ ಕಾರಣದಿಂದ ನಿಮ್ಮ ವಿರುದ್ಧ ಬಂಧನದ ಆದೇಶ ಜಾರಿಯಾಗಿದೆ. ಈ ಕೂಡಲೇ ನಿಮ್ಮ ಕೆನರಾ ಬ್ಯಾಂಕ್ ಖಾತೆಗೆ ₹ 12.65 ಲಕ್ಷ ವರ್ಗಾವಣೆ ಮಾಡಿ. ‌ಇಲ್ಲದಿದ್ದರೆ ನಿಮ್ಮನ್ನು ಬಂಧಿಸಬೇಕಾಗುತ್ತದೆ’ ಎಂದು ಭಯಗೊಳಿಸಿದ್ದಾರೆ.

ಸೈಬರ್ ವಂಚಕರ ಈ ಮಾತಿಗೆ ಹೆದರಿದ ದಂಪತಿ ಕೆನರಾ ಬ್ಯಾಂಕ್ ಖಾತೆಗೆ ಹಣವನ್ನು ಆರ್‌ಟಿಜಿಎಸ್ ಮಾಡಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.