ADVERTISEMENT

ಆನೆಗಮಡುಗು: ಬರಡು ರಾಸು ತಪಾಸಣೆ, ಚಿಕಿತ್ಸಾ ಶಿಬಿರ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 2:28 IST
Last Updated 10 ಆಗಸ್ಟ್ 2025, 2:28 IST
ಶಿಡ್ಲಘಟ್ಟ ತಾಲ್ಲೂಕಿನ ಆನೇಮಡುಗು ಗ್ರಾಮದಲ್ಲಿ ಜಿಕೆವಿಕೆಯ ಅಂತಿಮ ವರ್ಷದ ಬಿಎಸ್‌ಸಿ (ಆನರ್ಸ್) ಕೃಷಿ ವಿದ್ಯಾರ್ಥಿಗಳು ಬರಡು ರಾಸುಗಳ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಸಿದರು
ಶಿಡ್ಲಘಟ್ಟ ತಾಲ್ಲೂಕಿನ ಆನೇಮಡುಗು ಗ್ರಾಮದಲ್ಲಿ ಜಿಕೆವಿಕೆಯ ಅಂತಿಮ ವರ್ಷದ ಬಿಎಸ್‌ಸಿ (ಆನರ್ಸ್) ಕೃಷಿ ವಿದ್ಯಾರ್ಥಿಗಳು ಬರಡು ರಾಸುಗಳ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಸಿದರು   

ಶಿಡ್ಲಘಟ್ಟ: ತಾಲ್ಲೂಕಿನ ಆನೆಮಡುಗು ಗ್ರಾಮದಲ್ಲಿ ಅಂತಿಮ ವರ್ಷದ ಬಿಎಸ್‌ಸಿ (ಆನರ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ 2025–26ರ ಅಡಿ ಬರಡು ರಾಸುಗಳ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಮ್ಮಿಕೊಂಡರು. 

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಚಿಂತಾಮಣಿಯ ಕುರುಬೂರಿನ ರೇಷ್ಮೆ ಕೃಷಿ ಮಹಾವಿದ್ಯಾಲಯ, ಆನೆಮಡುಗು ಹಾಲು ಉತ್ಪಾದಕರ ಸಂಘದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು. 

ಚಿಮುಲ್ ಶಿಬಿರ ಘಟಕದ ವ್ಯವಸ್ಥಾಪಕ ಡಾ.ರವಿಕಿರಣ್ ಬಿ.ಆರ್ ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರಮುಖ ಆದಾಯ ಮೂಲ ಪಶುಸಂಗೋಪನೆ ಆಗಿದೆ. ಹಾಲಿನ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸಲು ಹಸುಗಳಿಗೆ ಪ್ರೋಟಿನ್ ಯುಕ್ತ ಆಹಾರ ನೀಡಬೇಕು. ಹಾಲಿನಲ್ಲಿ ಫ್ಯಾಟ್ ಪ್ರಮಾಣ ಹೆಚ್ಚುವುದರಿಂದ ರೈತರಿಗೆ ಹೆಚ್ಚಿನ ಆದಾಯ ಸಿಗಲಿದೆ ಎಂದರು.

ADVERTISEMENT

ಹಾಲಿನ ಉತ್ಪಾದನೆ ಹೆಚ್ಚಳದಿಂದ ರೈತರು ಹೆಚ್ಚಿನ ಆದಾಯ ಗಳಿಸಬಹುದು. ಕ್ಯಾಲ್ಸಿಯಂ ಮತ್ತು ಮಿನರಲ್ಸ್ ಇರುವ ನ್ಯೂಟ್ರಿಷನ್ ಆಹಾರವನ್ನು ಹಸುಗಳಿಗೆ ಕೊಡಬೇಕು. ಸೀಮೆ ಹುಲ್ಲಿನ ಜೊತೆ ದ್ವಿದಳ ಧಾನ್ಯಗಳ ಹುಲ್ಲು, ಅಜೋಲ ಕೊಡಬೇಕು ಎಂದರು.

ಗ್ರಾಮದ 12 ಹಸು, 10 ಎಮ್ಮೆ ಸೇರಿದಂತೆ 60ಕ್ಕೂ ಹೆಚ್ಚು ಕುರಿ ಹಾಗು ಮೇಕೆಗಳಿಗೆ ಚಿಕಿತ್ಸೆ ನೀಡಲಾಯಿತು. ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿಸಲಾಯಿತು.

ಜಿಕೆವಿಕೆ ಪ್ರಾಧ್ಯಾಪಕಿ ಡಾ.ಸಿ.ಎಂ.ಸವಿತಾ, ಕೆ.ನಾರಾಯಣಸ್ವಾಮಿ, ಪಶು ವೈದ್ಯಾಧಿಕಾರಿ ಡಾ.ಶ್ರೀನಾಥರೆಡ್ಡಿ, ವಿಸ್ತರಣಾಧಿಕಾರಿ ಶಶಿಕುಮಾರ್, ರೈತರು, ಗ್ರಾಮಸ್ಥರು, ರೈತ ಮಹಿಳೆಯರು ಹಾಗು ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.