ADVERTISEMENT

ವಸೂಲಿ ಬಾಜಿ ಮಾಡುವವರಿಗೆ ಮುಂದಿನ ಚುನಾವಣೆಯಲ್ಲಿ ಸೋಲು: ಎಸ್.ಆರ್. ಪಾಟೀಲ್

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 13:23 IST
Last Updated 3 ಮಾರ್ಚ್ 2021, 13:23 IST

ಚಿಕ್ಕಬಳ್ಳಾಪುರ: 174ರಲ್ಲಿ 111 ಕ್ವಾರಿಗಳು ಜಿಲ್ಲೆಯಲ್ಲಿ ಕೆಲಸ ಮಾಡುತ್ತಿವೆ. ಜಿಲ್ಲೆಯಲ್ಲಿ ವಸೂಲಿ ಬಾಜಿ ಇದೆ. ಈ ವಸೂಲಿ ಬಾಜಿ ಮಾಡುವವರು ಉಪಚುನಾವಣೆಯಲ್ಲಿ ಗೆದ್ದಿರಬಹುದು. ಆದರೆ ಮುಂದಿನ ಚುನಾವಣೆಯಲ್ಲಿ ಧೂಳೀಪಟವಾಗುವರು.

ಕಚ್ಚಾತೈಲದ ಬೆಲೆ ಕಡಿಮೆ ಆಗಿದ್ದರೂ ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಿದೆ. ಆದಾನಿ, ಅಂಬಾನಿಗೆ ದೇಶದ ಸಂಸ್ಥೆ ಗಳನ್ನು ಮಾರಾಟ ಮಾಡಲಾಗುತ್ತಿದೆ. ಈಗ ಮಾರೋಕೆ ಏನು ಉಳಿದಿಲ್ಲ. ಈಗ ಇವರು ದೇಶದ ಮಾನವ ಸಂಪನ್ಮೂಲವನ್ನೂ ಮಾರುವರು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಟೀಕಿಸಿದರು.

ಯಾರಾದರೂ ಶ್ರೀಮಂತರು ವಸ್ತುಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಿದ್ದರೆ ಈ ಹಿಂದೆ ಜಿಲ್ಲಾಧಿಕಾರಿ ದಾಳಿ ಮಾಡಿ ವಶಪಡಿಸಿಕೊಳ್ಳುತ್ತಿದ್ದರು. ಆದರೆ ಈಗ ಬಹುರಾಷ್ಟ್ರೀಯ ಕಂಪನಿಗಳಿಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ ಆಹಾರ ಅಭದ್ರತೆಗೆ ದಾರಿ ಮಾಡಿಕೊಟ್ಟಿದ್ದಾರೆ ಎಂದರು.

ADVERTISEMENT

ಎಂದಿಗೂ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ನಾಶವಾಗುವುದಿಲ್ಲ. ಈಗ ಸ್ವಲ್ಪ ವ್ಯತ್ಯಾಸವಾಗಿದೆ. ಆದರೆ ಕಾಂಗ್ರೆಸ್ ಗೆ ಗಟ್ಟಿ ನೆಲೆ ಇದ್ದೇ ಇದೆ ಎಂದುಕೋಲಾರ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.

ಮೋದಿ ಅವರು ಬಂದ ಮೇಲೆ ಸ್ವಾತಂತ್ರ್ಯ ಅತಂತ್ರವಾಗಿದೆ. ಭರತ ಖಂಡದಲ್ಲಿನ ಎಲ್ಲ‌ಸಮುದಾಯದ ಜನರಿಗೆ ಮತ್ತೆ ಈ ನರೇಂದ್ರ ಮೋದಿ ಅವರ ಮುಷ್ಟಿಯಿಂದ ಸ್ವಾತಂತ್ರ್ಯ ಕೊಡಿಸಬೇಕಾಗಿದೆ.

ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ನಿರುದ್ಯೋಗ ಹೆಚ್ಚಿತು. ಉದ್ಯೋಗ ಸೃಷ್ಟಿಯೇ ಇಲ್ಲ. ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೊಸ ವಾತಾವರಣ ಕಂಡೆ. ಮೋದಿ ಮೋದಿ ಎಂದು ಹೇಳಿದ ಹುಡುಗರು ಡಿಕೆ ಡಿಕೆ ಎನ್ನತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಅನ್ನದಾತ ಎನ್ನುತ್ತಿದ್ದಾರೆ.

ನಮ್ಮದೆಲ್ಲ ಒಂದೇ ದೃಷ್ಟಿ.‌ ಕಾಂಗ್ರೆಸ್ ಉಳಿದರೆ ದೇಶ ಉಳಿಯುತ್ತದೆ. ನಾವೆಲ್ಲರೂ ಒಗ್ಗೂಡಿ ನಡೆಯುತ್ತೇವೆ ಎಂದು ಮುನಿಯಪ್ಪ ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಕೋಲಾರ ಚಿಕ್ಕಬಳ್ಳಾಪುರ ಕ್ಕೆ ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ ಯೋಜನೆ ಜಾರಿ ಆಯಿತು. ಇದರಿಂದ ಕೆರೆಗಳಿಗೆ ನೀರು ಹರಿದಿದೆ. ವೀರಪ್ಪ ಮೊಯ್ಲಿ ಅವರ ಕನಸಿಕ ಎತ್ತಿನಹೊಳೆ ಯೋಜನೆ ಜಾರಿಯಲ್ಲಿದೆ.

ಎತ್ತಿನಹೊಳೆ ಯೋಜನೆ ವೇಗ ಪಡೆಯುತ್ತಿಲ್ಲ. ಸರ್ಕಾರ ಈ ಯೋಜನೆಗೆ ಹಣ ನೀಡಬೇಕು ಎಂದು
ಗೌರಿಬಿದನೂರು ಶಾಸಕ ಶಿವಶಂಕರ ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.