ADVERTISEMENT

ನಿಧಿ ಸಮರ್ಪಣಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 2:03 IST
Last Updated 18 ಜನವರಿ 2021, 2:03 IST
ಚಿಂತಾಮಣಿಯಲ್ಲಿ ಶನಿವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ನೌಕರರ ಸಂಘ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯನ್ನು ರಾಜ್ಯ ಸಂಘದ ಸಂಘಟನಾ ಕಾರ್ಯದರ್ಶಿ ಸಿ.ಆರ್. ನಾಗಭೂಷಣ್ ಉದ್ಘಾಟಿಸಿದರು
ಚಿಂತಾಮಣಿಯಲ್ಲಿ ಶನಿವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ನೌಕರರ ಸಂಘ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯನ್ನು ರಾಜ್ಯ ಸಂಘದ ಸಂಘಟನಾ ಕಾರ್ಯದರ್ಶಿ ಸಿ.ಆರ್. ನಾಗಭೂಷಣ್ ಉದ್ಘಾಟಿಸಿದರು   

ಗೌರಿಬಿದನೂರು: ನಗರದಲ್ಲಿ ಭಾನುವಾರ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ನಗರಸಭೆ ಸದಸ್ಯ ಮೋಹನ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇಡೀ ರಾಷ್ಟ್ರದ ಜನತೆ ದಶಕಗಳಿಂದ ಕಾಯುತ್ತಿರುವ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಸುಯೋಗ ‌ಕೂಡಿಬಂದಿದೆ. ದೇಶದಲ್ಲಿನ ಎಲ್ಲ ಹಿಂದೂ ಧರ್ಮದವರು ಒಮ್ಮತದಿಂದ ಈ ಧಾರ್ಮಿಕ ಕಾರ್ಯಕ್ಕೆ ಸಹಕಾರಿಯಾಗಬೇಕಾಗಿದೆ ಎಂದರು.

ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ‌ಪ್ರತಿ ಮನೆಯಿಂದ ದೇಣಿಗೆ ಸಂಗ್ರಹಣೆ ಮಾಡಿ ನಿಧಿ ಸಮರ್ಪಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಇದರಿಂದ ರಾಷ್ಟ್ರದ ನಿಜವಾದ ಕರ್ತವ್ಯವನ್ನು ಪೂರೈಸಿದಂತಾಗುತ್ತದೆ. ಈ ಸತ್ಕಾರ್ಯಕ್ಕೆ ಎಲ್ಲರೂ ಕೈಜೋಡಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.

ADVERTISEMENT

ಮುಖಂಡರಾದ ಮಂಜುನಾಥ, ಅಂಜನಾಚಾರಿ, ಮಂಜುನಾಥ್ ರಾವ್, ಮಣಿಕಂಠ, ಮಧು, ಸತೀಶ್, ಲಕ್ಷ್ಮಣರಾವ್, ಯೋಗೇಶ್, ಸುರೇಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.