ADVERTISEMENT

ಗೌರಿಬಿದನೂರು| 15 ಕುಟುಂಬ ಮರಳಿ ಹಿಂದೂ ಧರ್ಮಕ್ಕೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 21:37 IST
Last Updated 21 ಜುಲೈ 2025, 21:37 IST
ಗೌರಿಬಿದನೂರಿನಲ್ಲಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಹದಿನೈದು ಕುಟುಂಬಗಳು ಮರಳಿ ಹಿಂದೂ ಧರ್ಮಕ್ಕೆ ಘರ್ ವಾಪಸಿ ನಡೆಯಿತು
ಗೌರಿಬಿದನೂರಿನಲ್ಲಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಹದಿನೈದು ಕುಟುಂಬಗಳು ಮರಳಿ ಹಿಂದೂ ಧರ್ಮಕ್ಕೆ ಘರ್ ವಾಪಸಿ ನಡೆಯಿತು   

ಗೌರಿಬಿದನೂರು: ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಹದಿನೈದು ಕುಟುಂಬಗಳ ಘರ್ ವಾಪಸಿ ಕಾರ್ಯಕ್ರಮ ನಡೆಯಿತು.

ಹಲವು ವರ್ಷಗಳ ಹಿಂದೆ ನಾಗಸಂದ್ರ, ಗಾಂಧಿನಗರ, ಕದಿರೇನಹಳ್ಳಿ ಹಾಗೂ ನೆರೆಯ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿಯಲ್ಲಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಹದಿನೈದು ಕುಟುಂಬಗಳನ್ನು ಮರಳಿ ಹಿಂದೂ ಧರ್ಮಕ್ಕೆ ವಾಪಸ್ ಕರೆ ತರಲಾಯಿತು.

ಭಾನುವಾರ ವಿದುರಾಶ್ವತ್ಥ ಅಶ್ವತ್ಥನಾರಾಯಣಸ್ವಾಮಿ ದೇಗುದಲ್ಲಿ ನಡೆದ ಘರ್ ವಾಪಸಿ ಕಾರ್ಯವನ್ನು ಶಾಸ್ತ್ರೋಕ್ತವಾಗಿ ನಡೆಸಲಾಯಿತು.

ADVERTISEMENT

ಮುಖಂಡ ರವಿನಾರಾಯಣರೆಡ್ಡಿ ಮಾತನಾಡಿ, ವಿಶ್ವದ ಎಲ್ಲೆಡೆ ಜನರು ಸ್ವಯಂ ಪ್ರೇರಿತರಾಗಿ ಹಿಂದೂ ಧರ್ಮ ಸ್ವೀಕರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲ ಕ್ರೈಸ್ತ ಮಿಷನರಿಗಳು ತೋರುವ ಅಮಿಷಕ್ಕೆ ಬಲಿಯಾಗಿ ಮತಾಂತರಗೊಳ್ಳುತ್ತಿದ್ದಾರೆ. ನಂತರ ಅವರು ನಡೆಸುವ ತಾರತಮ್ಯ ಕಂಡು ಪಶ್ಚಾತ್ತಾಪ ಪಡುತ್ತಿರುತ್ತಾರೆ. ಈಗಾಗಲೇ ಇಂತವರನ್ನು ಗುರುತಿಸಿ ಅವರ ಮನವೊಲಿಸಿ ಮತ್ತೆ ಮಾತೃ ಧರ್ಮಕ್ಕೆ ಕರೆ ತರುವ ಕೆಲಸ ನಿರಂತರವಾಗಿ ನಡೆದಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.