ADVERTISEMENT

ಗೌರಿಬಿದನೂರು: ಬೀದಿದೀಪ ತಲೆಗೆ ಬಿದ್ದು ವ್ಯಕ್ತಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 3:11 IST
Last Updated 3 ನವೆಂಬರ್ 2025, 3:11 IST
ತಲೆಗೆ ಗಾಯ; ಕಾಲಿಗೆ ಶಸ್ತ್ರಚಿಕಿತ್ಸೆ!
ತಲೆಗೆ ಗಾಯ; ಕಾಲಿಗೆ ಶಸ್ತ್ರಚಿಕಿತ್ಸೆ!   

ಗೌರಿಬಿದನೂರು: ನಗರದ ಬಿಎಚ್ ರಸ್ತೆಯ ಎಚ್‌ಡಿಎಫ್‌ಸಿ ಬ್ಯಾಂಕ್ ಬಳಿ ಬೀದಿದೀಪವೊಂದು ಬೈಕ್‌ನಲ್ಲಿ ಹೋಗುತ್ತಿದ್ದ ವಿ ಪುರಂ ನಿವಾಸಿ ಸಿಕಂದರ್ ಖಾನ್ (45) ಎಂಬವರ ತಲೆಮೇಲೆ ಬಿದ್ದಿದೆ.

ಭಾನುವಾರ ಬೆಳಗ್ಗೆ ಅಂಗಡಿ ತೆರೆಯಲು ಮನೆಯಿಂದ ಹೊರಟಿದ್ದರು. ರಸ್ತೆ ಮಧ್ಯದ ವಿಭಜಕದಲ್ಲಿ ಅಳವಡಿಸಿದ್ದ ಕಬ್ಬಿಣದ ಬೀದಿದೀಪ ಏಕಾಏಕಿ ಬೈಕ್‌ನಲ್ಲಿದ್ದ ಸಿಕಂದರ್ ಖಾನ್ ತಲೆ ಮೇಲೆ ಬಿದ್ದಿದೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಸ್ಥಳೀಯರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಗಂಭೀರ ಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ADVERTISEMENT

ಬೀದಿದೀಪಗಳ ನಿರ್ವಹಣೆಯಲ್ಲಿ ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ಗುತ್ತಿಗೆದಾರರ ನಿರ್ಲಕ್ಷ್ಯವೋ? ಘಟನೆಗೆ ಯಾರು ಹೊಣೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.