ಸಾವು
(ಪ್ರಾತಿನಿಧಿಕ ಚಿತ್ರ)
ಗೌರಿಬಿದನೂರು: ಹಾವು ಕಡಿದ ತಕ್ಷಣ ಆಸ್ಪತ್ರೆಗೆ ಸಾಗಿಸಲು ಸಕಾಲಕ್ಕೆ ಆಂಬುಲೆನ್ಸ್ ಮತ್ತು ವೈದ್ಯರು ಸಿಗದೆ ಪಂಚಾಯಿತಿಯ ಗ್ರೇಡ್–2 ಕಾರ್ಯದರ್ಶಿಯೊಬ್ಬರು ಮೃತಪಟ್ಟಿದ್ದಾರೆ.
ತಾಲ್ಲೂಕಿನ ದಿನ್ನೇನಹಳ್ಳಿ ಗ್ರಾಮದ ತೋಟದಲ್ಲಿ ಶನಿವಾರ ರಾತ್ರಿ ಮೇವು ಕೊಯ್ಯುತ್ತಿದ್ದ ಮುದಲೋಡು ಪಂಚಾಯಿತಿಯ ಗ್ರೇಡ್–2 ಕಾರ್ಯದರ್ಶಿ ಅಶ್ವತ್ಥಪ್ಪ ಕಾಲಿಗೆ ಹಾವು ಕಚ್ಚಿತು.
ತಕ್ಷಣ ಮಂಚೇನಹಳ್ಳಿ ಆಂಬುಲೆನ್ಸ್‌ಗೆ ಕರೆ ಮಾಡಿದರು. ಪೆಟ್ರೋಲ್ ಇಲ್ಲ ಬರುವುದು ತಡವಾಗುತ್ತದೆ ಎಂದು ಚಾಲಕ ತಿಳಿಸಿದ. ಗೌರಿಬಿದನೂರು ನಗರದ ಆಂಬುಲೆನ್ಸ್ ಕರೆ ಮಾಡಿದರು. ಅದರ ಚಾಲಕನೂ ಬರುವುದು ತಡವಾಗುತ್ತದೆ ಎಂದು ಹೇಳಿದ.
ಈ ನಡುವೆ ಅವರು ದಿನ್ನೇನಹಳ್ಳಿಯಿಂದ 10 ಕಿ.ಮಿ ದೂರದ ಡಿ. ಪಾಳ್ಯ ಪ್ರಾಥಮಿಕ ಚಿಕಿತ್ಸಾ ಕೇಂದ್ರ ತಲುಪಿದರು. ಆದರೆ, ಅಲ್ಲಿ ವೈದ್ಯರು ಇರಲಿಲ್ಲ. ಹಾಗಾಗಿ ಆಟೊದಲ್ಲಿ 13 ಕಿ.ಮೀ ದೂರದ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ತಲುಪಿದರು. ಆ ವೇಳೆಗಾಗಲೇ ದೇಹದಲ್ಲಿ ವಿಷ ವ್ಯಾಪಿಸಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ಅಶ್ವತ್ಥಪ್ಪ ಅವರ ಪುತ್ರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.