ADVERTISEMENT

ಗುಡಿಬಂಡೆ ತಾಲ್ಲೂಕಿನಲ್ಲಿ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 5:13 IST
Last Updated 24 ಅಕ್ಟೋಬರ್ 2021, 5:13 IST
ಅಮಾನಿಬೈರಸಾಗರ ಕೆರೆ ಕೋಡಿ ಹರಿಯುತ್ತಿರುವುದು
ಅಮಾನಿಬೈರಸಾಗರ ಕೆರೆ ಕೋಡಿ ಹರಿಯುತ್ತಿರುವುದು   

ಗುಡಿಬಂಡೆ: ಪಟ್ಟಣದಲ್ಲಿ ಶನಿವಾರ ಮಧ್ಯಾಹ್ನ ಸತತ ಮೂರು ಗಂಟೆ ಕಾಲ ಉತ್ತಮ ಮಳೆ ಸುರಿಯಿತು.

4ನೇ ವಾರ್ಡ್‌ನ ಆರ್.ಕೆ. ಚಿತ್ರಮಂದಿರದ ಬಳಿಯ ಕಾಲುವೆಯಲ್ಲಿ ತ್ಯಾಜ್ಯ ತುಂಬಿ ರಸ್ತೆ ಪಕ್ಕದ ಮನೆಗಳಿಗೆ ನುಗ್ಗಿತು. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಜನರು ಮಳೆ ಲೆಕ್ಕಿಸದೇ ಕಾಲುವೆಗೆ ಅಡ್ಡಲಾಗಿದ್ದ ಕಸ ತೆಗೆದು ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಿದರು.

ಪಟ್ಟಣದಲ್ಲಿನ ಖಾಜಿಪೇಟೆಯ ಮೆಹರುನ್ನಿಸಾ ಅವರ ಮನೆಯ ಗೋಡೆ ಕುಸಿದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ADVERTISEMENT

ಕಳೆದ 15 ದಿನಗಳಿಂದಲೂ ಗುಡಿಬಂಡೆ ಸುತ್ತಮುತ್ತ ಉತ್ತಮ ಮಳೆಯಾಗುತ್ತಿದ್ದು, ಚಿತ್ರಾವತಿ ನದಿ ಹರಿಯುತ್ತಿದೆ. ಇದರಿಂದ ಯಾದಾರ್ಲಹಳ್ಳಿ ಕೆರೆ ಹಾಗೂ ಅಮಾನಿಬೈರಸಾಗರ ಕೆರೆ ಕೋಡಿ ಹರಿದಿದೆ. ಅಮಾನಿಬೈರಸಾಗರ ಕೆರೆಯಿಂದ ನೀರು ವಾಟದಹೊಸಹಳ್ಳಿ ಕೆರೆಗೆ ಹರಿಯುತ್ತದೆ. ಆ ಕೆರೆಯೂ ಕೋಡಿ ಹರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.