ADVERTISEMENT

ಲಾಠಿ ಹಿಡಿದು ರಸ್ತೆಗಿಳಿದ ಪಿಡಿಒ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 15:42 IST
Last Updated 30 ಮಾರ್ಚ್ 2020, 15:42 IST
ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿಯಲ್ಲಿನ ನಾಗರೀಕರಲ್ಲಿ ಸಾಮಾಜಿಕ ಅಂತರದ ಬಗ್ಗೆ ತಿಳಿಸಲು ಲಾಠಿ ಹಿಡಿದ ಪಿಡಿಒ ಬಾಲಕೃಷ್ಣ
ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿಯಲ್ಲಿನ ನಾಗರೀಕರಲ್ಲಿ ಸಾಮಾಜಿಕ ಅಂತರದ ಬಗ್ಗೆ ತಿಳಿಸಲು ಲಾಠಿ ಹಿಡಿದ ಪಿಡಿಒ ಬಾಲಕೃಷ್ಣ   

ಗೌರಿಬಿದನೂರು: ತಾಲ್ಲೂಕಿನ ವಾಟದಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರಿಗೆ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿ‌ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತೀ‌ ಗ್ರಾಮದಲ್ಲಿ ಸಭೆ ನಡೆಸಿ ಯಾರೊಬ್ಬರೂ ಮನೆಯಿಂದ ಹೊರಬರದಂತೆ ತಿಳಿಸಲಾಗುತ್ತಿದೆ. ಅನಾವಶ್ಯಕವಾಗಿ ಹೊರಗಡೆ ಓಡಾಡುವವರನ್ನು ನಿಯಂತ್ರಣ ಮಾಡಲು ಸ್ವತಃ ಗ್ರಾಮ ಪಂಚಾಯಿತಿ ಅಧಿಕಾರಿ ಬಾಲಕೃಷ್ಣ ಅವರು ಲಾಠಿ ಹಿಡಿದು‌ ಬೀದಿಗಿಳಿದಿದ್ದಾರೆ.

ನಾಗರೀಕರ ನಿತ್ಯದ ಜೀವನಕ್ಕೆ ‌ಅವಶ್ಯಕವಿರುವ ಅಗತ್ಯ ಸಾಮಗ್ರಿಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ಪೂರೈಕೆ ಮಾಡಲಾಗುವುದು. ಇದರ ಜತೆಗೆ ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳನ್ನು ಕಲ್ಪಿಸಲು‌ ಬದ್ಧರಾಗಿದ್ದೇವೆ. ದಯಮಾಡಿ ಯಾರೊಬ್ಬರೂ ಮನೆಯಿಂದ ಹೊರಗಡೆ ಬರದೆ ಸಾಮಾಜಿಕ ಅಂತರವನ್ನು ಕಾಪಾಡಬೇಕಾಗಿದೆ ಎಂದು ಬಾಲಕೃಷ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT