ಗೌರಿಬಿದನೂರು: ನಗರದಲ್ಲಿ ಸೋಮವಾರ ಮಧ್ಯಾಹ್ನ ಅರ್ಧ ಗಂಟೆ ಮಳೆ ಸುರಿಯಿತು. ನಗರದ ಬಸ್ ನಿಲ್ದಾಣ, ಮಾದನಹಳ್ಳಿ, ಕರೇಕಲ್ಲಹಳ್ಳಿ, ವಿ.ವಿ ಪುರಂ ಸೇರಿದಂತೆ ಹಲವು ಕಡೆ ಆರಂಭವಾದ ಜೋರಾದ ಮಳೆ, ಬಿರುಗಾಳಿ ಜೊತೆಗೆ ಅಲಿಕಲ್ಲು ಸಹಿತವಾಗಿ ಸುರಿಯಿತು.
ಗ್ರಾಮಾಂತರ ಠಾಣೆ ಮುಂಭಾಗದ ಕೆಳ ಸೇತುವೆ ಸಂಪೂರ್ಣವಾಗಿ ಜಲಾವೃತಗೊಂಡಿದ್ದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡಿದರು.
ನಗರದ ಹಲವು ಕಡೆ ಮರಗಳ ರೆಂಬೆ ಕೊಂಬೆಗಳು ನೆಲಕ್ಕೆ ಉರುಳಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.