ADVERTISEMENT

ಸರ್ಕಾರಿ ಆಸ್ಪತ್ರೆಯಲ್ಲಿ ಹೈಟೆಕ್ ಲ್ಯಾಬ್: ಶಾಸಕರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 3:19 IST
Last Updated 27 ಜೂನ್ 2021, 3:19 IST
ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ವಿ.ಮುನಿಯಪ್ಪ ಭೇಟಿ ನೀಡಿ ಆಮ್ಲಜನಕ ಘಟಕ ಹಾಗೂ ಹೈಟೆಕ್ ಲ್ಯಾಬ್‌ಗಳ ಪೂರ್ವಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದರು
ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ವಿ.ಮುನಿಯಪ್ಪ ಭೇಟಿ ನೀಡಿ ಆಮ್ಲಜನಕ ಘಟಕ ಹಾಗೂ ಹೈಟೆಕ್ ಲ್ಯಾಬ್‌ಗಳ ಪೂರ್ವಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದರು   

ಶಿಡ್ಲಘಟ್ಟ: ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ₹80ಲಕ್ಷ ವೆಚ್ಚದ ಹೈಟೆಕ್ ಲ್ಯಾಬನ್ನು ಸಿದ್ಧಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೊರೊನಾ ಸೇರಿದಂತೆ ಹಲವಾರು ಕಾಯಿಲೆಗಳಿಗೆ ಸಂಬಂಧಿಸಿದಂತೆ ರೋಗಿಗಳು ಬೇರೆಡೆಗೆ ಹೋಗದೇ ಇಲ್ಲಿಯೇ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಆಮ್ಲಜನಕ ಘಟಕ ಹಾಗೂ ಹೈಟೆಕ್ ಲ್ಯಾಬ್‌ಗಳ ಪೂರ್ವಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದರು.

ಕೊರೊನಾ ಪರೀಕ್ಷೆಗಾಗಿ ಇದುವರೆಗೂ ಜಿಲ್ಲಾ ಕೇಂದ್ರಕ್ಕೆ ಎಡತಾಕಬೇಕಿತ್ತು. ಇದೀಗ ಆಟೋ ಅನಲೈಜರ್ಸ್ ಯಂತ್ರಗಳನ್ನು ಖರೀದಿಸಿದ್ದು, ಥೈರಾಯ್ಡ್, ಲಿವರ್, ಕಿಡ್ನಿ, ಕೊರೊನಾ ಮಾರ್ಕರ್ಸ್ ಮುಂತಾದ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದು ಎಂದು ಹೇಳಿದರು.

ADVERTISEMENT

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಜಿಲ್ಲಾಮಟ್ಟದ ಸಿಎಸ್‌ಆರ್ ಅನುದಾನದಿಂದ ನಿರ್ಮಾಣವಾಗುತ್ತಿರುವ ಆಮ್ಲಜನಕ ತಯಾರಿಕಾ ಘಟಕದ ನೆಲಹಾಸು ಮತ್ತು ಶೆಡ್ ಸಿದ್ಧವಾಗಿದೆ. ತಾಲ್ಲೂಕಿನಲ್ಲಿ ಕೊರೊನಾ ಪೀಡಿತರ ಸಂಖ್ಯೆ ಕಡಿಮೆಯಾಗಿರುವುದರಿಂದ ಎರಡು ಕೋವಿಡ್ ಕೇರ್ ಸೆಂಟರ್‌ಗಳನ್ನು ಮುಚ್ಚಿದ್ದೇವೆ. ಈಗಲೂತಾಲ್ಲೂಕಿನಲ್ಲಿ ದಿನನಿತ್ಯ 800 ರಿಂದ 900 ಸ್ವಾಬ್ ಪರೀಕ್ಷೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಆಮ್ಲಜನಕದ 92 ಸಿಲಿಂಡರ್‌ಗಳು ನಮ್ಮಲ್ಲಿವೆ. ಈಗ 4 ರಿಂದ 5 ಸಿಲಿಂಡರ್‌ ಉಪಯೋಗಿಸುತ್ತಿದ್ದೇವೆ. ಮುಂದಿನ ವರ್ಷದೊಳಗೆ ನಮಗೆ ಸಿ.ಟಿ.ಸ್ಕ್ಯಾನ್ ಯಂತ್ರವನ್ನು ತರಿಸಿಕೊಡಿ, ಅನುಕೂಲವಾಗುತ್ತದೆ ಎಂದು ಶಾಸಕರಿಗೆ ಮನವಿ ಮಾಡಿದರು.

ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್ ದೇವರಾಜ, ಸಿಬ್ಬಂದಿಗಳಾದ ಶಶಿಕುಮಾರ್, ಸುನಿಲ್, ನಂದಿನಿ, ಚೈತ್ರಾ, ಅಪ್ರೋಜ್, ಕೀರ್ತಿ, ರಜಿನಿ, ಚೇತನ್, ಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.