ADVERTISEMENT

ಶಿಡ್ಲಘಟ್ಟ: ಕುಸಿದ ಮನೆ, ಅಂಗವಿಕಲ ದಂಪತಿಯ ಬದುಕು ಅತಂತ್ರ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 3:26 IST
Last Updated 1 ಡಿಸೆಂಬರ್ 2020, 3:26 IST
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಅಂಗವಿಕಲ ದಂಪತಿ ದೇವೀರಮ್ಮ ಮತ್ತು ರತ್ನಪ್ಪ ಅವರ ಮನೆ ಗೋಡೆ ಕುಸಿದಿದೆ
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಅಂಗವಿಕಲ ದಂಪತಿ ದೇವೀರಮ್ಮ ಮತ್ತು ರತ್ನಪ್ಪ ಅವರ ಮನೆ ಗೋಡೆ ಕುಸಿದಿದೆ   

ಶಿಡ್ಲಘಟ್ಟ: ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿಅಂಗವಿಕಲ ದಂಪತಿಯ ಮನೆ ಗೋಡೆ ಕುಸಿದಿದ್ದು, ಕನಿಷ್ಠ ಅದರ ದುರಸ್ತಿಗೂ ಹಣವಿಲ್ಲದೆ ಅವರು ಅತಂತ್ರರಾಗಿದ್ದಾರೆ.

ನಿವಾರ್ ಪರಿಣಾಮ ಸುರಿದ ಮಳೆಯಿಂದ ಅಪ್ಪೇಗೌಡನಹಳ್ಳಿಯ ಅಂಗವಿಕಲ ದಂಪತಿ ದೇವೀರಮ್ಮ ಮತ್ತು ರತ್ನಪ್ಪ ಅವರ ಹಳೆಯ ಜಂತಿಕೆ ಮನೆಯ ಎರಡು ಕಡೆ ಗೋಡೆ ಕುಸಿದಿದೆ. ಮಾಳಿಗೆ ಈಗಲೋ, ಆಗಲೋ ಕುಸಿಯುವಂತಿದೆ. ಅವರೀಗ ಜೀವ ಭಯದಿಂದ ವಾಸಿಸುತ್ತಿದ್ದಾರೆ. ಅಶಕ್ತ ಸ್ಥಿತಿಯಲ್ಲಿರುವ ಅವರು ಸರ್ಕಾರ ಹಾಗೂ ಸಮುದಾಯದ ನೆರವನ್ನು ಯಾಚಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT