ಗೌರಿಬಿದನೂರು: ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಾರ್ವಜನಿಕ ಆಸ್ಪತ್ರೆಯ ಕಾಮಗಾರಿಯನ್ನು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಕ್ತಾಯ ಹಂತದಲ್ಲಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಐವತ್ತು ದಿನಗಳ ಗಡುವು ನೀಡಿ ಗುಣಮಟ್ಟ ಕಾಪಾಡದಿದ್ದಲ್ಲಿ ದಂಡ ವಿಧಿಸಲು ಮೇಲಧಿಕಾರಿಗಳಿಗೆ ಸೂಚಿಸುವುದಾಗಿ ಎಚ್ಚರಿಕೆ ನೀಡಿದರು.
ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಮತ್ತು ಅತ್ಯಾವಶ್ಯಕ ವ್ಯವಸ್ಥೆಗಳನ್ನು ಕಲ್ಪಿಸುವ ಉದ್ದೇಶದಿಂದ ಹೈಟೆಕ್ ಮಾದರಿಯಲ್ಲಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ. ಸಚಿವರ ಜತೆ ಚರ್ಚಿಸಿ ಅವಶ್ಯ ಇದ್ದಲ್ಲಿ ಇನ್ನಷ್ಟು ಅನುದಾನದ ಬೇಡಿಕೆ ಇಡಲಾಗುವುದು. ಹಳೆ ಕಾಂಪೌಂಡ್ ಕೆಡವಿ ಹೊಸ ಕಾಂಪೌಂಡ್ ನಿರ್ಮಿಸಲು ಹಾಗೂ ರೋಗಿಗಳ ಸಹಾಯಕರಿಗೆ ಪ್ರತ್ಯೇಕವಾಗಿ ಹೊರಾಂಗಣದ ಶೌಚಾಲಯ ನಿರ್ಮಿಸಲು ತಿಳಿಸಿದರು.
ಮುಖಂಡ ವೆಂಕಟರಾಮರೆಡ್ಡಿ, ಖಲೀಂಉಲ್ಲಾ, ಶ್ರೀನಿವಾಸಗೌಡ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.