ADVERTISEMENT

ದನದ ಚರ್ಮ ಅಕ್ರಮ ಸಾಗಣೆ: ಬಂಧನ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 15:48 IST
Last Updated 8 ಜೂನ್ 2025, 15:48 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಗೌರಿಬಿದನೂರು: ನಗರದ ಮಧುಗಿರಿ ರಸ್ತೆಯ ಕೆಇಬಿ ಮಾರಮ್ಮ ದೇವಸ್ಥಾನದ ಬಳಿ ಆಟೊದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ದನದ ಚರ್ಮವನ್ನು ನಗರ ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ.

ನಗರದ ಮಧುಗಿರಿ ರಸ್ತೆಯ ಕೆಇಬಿ ಬಳಿ ರಾತ್ರಿ 19 ದನದ ಚರ್ಮ, 43 ಕುರಿ ಚರ್ಮ ಮತ್ತು 112 ಮೇಕೆ ಮೇಕೆ ಚರ್ಮಗಳನ್ನು ಅಕ್ರಮವಾಗಿ ಮಧುಗಿರಿ ಕಡೆಗೆ ಸಾಗಣೆ ಮಾಡುತ್ತಿದ್ದಾಗ ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ನಗರ ಠಾಣೆ ಪೊಲೀಸರು ವಾಹನ ಚಾಲಕ ಶ್ರೀನಿವಾಸ್ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.