ADVERTISEMENT

ಗುಡಿಬಂಡೆ: ಜೋಳ ಖರೀದಿ ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 5:35 IST
Last Updated 25 ಜನವರಿ 2026, 5:35 IST
ಅಖಿಲ ಕರ್ನಾಟಕ ರೈತ ಸಂಘಟನೆ (ಎಕೆಆರ್‌ಎಸ್) ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿ
ಅಖಿಲ ಕರ್ನಾಟಕ ರೈತ ಸಂಘಟನೆ (ಎಕೆಆರ್‌ಎಸ್) ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿ   

ಗುಡಿಬಂಡೆ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಜೋಳ ಖರೀದಿ ಕೇಂದ್ರ ಸ್ಥಾಪನೆ ಮಾಡಿರುವುದು ಸ್ವಾಗತಾರ್ಹ ಎಂದು ಎಕೆಆರ್‌ಎಸ್ ರೈತ ಸಂಘ ಜಿಲ್ಲಾ ಸಹ ಸಂಚಾಲಕ ಎಚ್.ಪಿ ಲಕ್ಷ್ಮಿನಾರಾಯಣ ಹೇಳಿದರು.

ಶುಕ್ರವಾರ ಅಖಿಲ ಕರ್ನಾಟಕ ರೈತ ಸಂಘಟನೆಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕ್ಷೇತ್ರದಲ್ಲಿ ಸಾವಿರಾರು ರೈತರು ಜೋಳ ಬೆಳೆಯುತ್ತಾರೆ. ಆದರೆ ಆ ಜೋಳವನ್ನು ಮಾರಾಟ ಮಾಡಬೇಕಾದರೆ ಸರ್ಕಾರದಿಂದ ಖರೀದಿ ಕೇಂದ್ರ ಇರಲಿಲ್ಲ. ಜೋಳ ಖರೀದಿ ಕೇಂದ್ರ ಪ್ರಾರಂಭ ಮಾಡಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದರ ಭಾಗವಾಗಿ ರಾಜ್ಯ ಸರ್ಕಾರದ ಮೇಲೆ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ ಸುಧಾಕರ್ ಒತ್ತಡ ಹಾಕಿ ಜೋಳ ಖರೀದಿ ಕೇಂದ್ರವನ್ನು ತೆರೆದಿದ್ದಾರೆ ಎಂದರು.

ADVERTISEMENT

ಬಾಗೇಪಲ್ಲಿ ಎಪಿಎಂಸಿ ಕೇಂದ್ರದಲ್ಲಿ ಜೋಳ ಖರೀದಿ ಪ್ರಾರಂಭ ಮಾಡಿದ್ದಾರೆ. ರೈತರು ನೋಂದಣಿ ಮಾಡಿಸಿಕೊಂಡು ರೈತರು ಈ ಅವಕಾಶವನ್ನು ಉಪಯೋಗಿಸಿಕೊಳ್ಳುವಂತೆ ಆಗಬೇಕಾಗಿದೆ ಎಂದರು.

ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಾಲೇನಹಳ್ಳಿ ರಮೇಶ್, ರೈತ ಸಂಘದ ಮುಖಂಡ ರಿಯಾಜ್ ಬಾಷ, ಗುರಮೂರ್ತಿ, ಎ.ಎಚ್ ಶ್ರೀನಿವಾಸ್, ರಾಮಕೃಷ್ಣ, ಗೋವಿಂದಪ್ಪ, ವೈ.ಎನ್ ನಾಗರಾಜು, ಅದಿನಾರಾಯಣಪ್ಪ, ನವೀನ್ ರಾಜ್ ಕನ್ನಡಿಗ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.