ADVERTISEMENT

ವಕೀಲರ ಮನೆಯಲ್ಲಿ ₹ 12.50 ಲಕ್ಷ ಪತ್ತೆ

ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ಹಣ ಎಂಬ ದೂರು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 18:16 IST
Last Updated 4 ಡಿಸೆಂಬರ್ 2019, 18:16 IST
ವಕೀಲ ಪಿ.ಸುಬ್ರಮಣ್ಯ ಅವರ ಮನೆಯಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದರು
ವಕೀಲ ಪಿ.ಸುಬ್ರಮಣ್ಯ ಅವರ ಮನೆಯಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದರು   

ಚಿಕ್ಕಬಳ್ಳಾಪುರ: ಉಪ ಚುನಾವಣೆಯಲ್ಲಿ ಹಂಚಲು ಜೆಡಿಎಸ್ ಮುಖಂಡ, ವಕೀಲ ಪಿ.ಸುಬ್ರಮಣ್ಯ ಅವರ ಮನೆಯಲ್ಲಿ ಹಣ ಸಂಗ್ರಹಿಸಲಾಗಿದೆ ಎಂಬ ದೂರೊಂದು ಬಂದ ಕಾರಣ ಮಾದರಿ ನೀತಿ ಸಂಹಿತೆ (ಎಂಸಿಸಿ) ತಂಡದ ಅಧಿಕಾರಿಗಳು ಜೈಭೀಮ್ ನಗರದಲ್ಲಿರುವ ಸುಬ್ರಮಣ್ಯ ಅವರ ನಿವಾಸದಲ್ಲಿ ಬುಧವಾರ ರಾತ್ರಿ ತಪಾಸಣೆ ನಡೆಸಿದರು.

ತಪಾಸಣೆ ವೇಳೆ ಸುಬ್ರಮಣ್ಯ ಅವರ ನಿವಾಸದಲ್ಲಿ ಸುಮಾರು ₹ 12.50 ಲಕ್ಷ ನಗದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಪತ್ತೆಯಾದ ಹಣ ತಮ್ಮ ಕಕ್ಷಿದಾರರು ನೀಡಿದ್ದು ಮತ್ತು ಹಣಕಾಸು ವಹಿವಾಟಿಗೆ ಸೇರಿದ್ದು ಎಂದು ಸುಬ್ರಮಣ್ಯ ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ADVERTISEMENT

ಎಂಸಿಸಿ ತಂಡದ ಮಾಹಿತಿ ಮೇರೆಗೆ ರಾತ್ರಿ 9ರ ಸುಮಾರಿಗೆ ಆದಾಯ ತೆರಿಗೆ ಇಲಾಖೆ ಬೆಂಗಳೂರು ವಿಭಾಗದ ಉಪ ನಿರ್ದೇಶಕ ಸುರೇಶ್ ಕುಮಾರ್ ಅವರು ಸುಬ್ರಮಣ್ಯ ಅವರ ಮನೆಗೆ ಬಂದು ಪತ್ತೆಯಾದ ಹಣದ ಮಾಹಿತಿ ಕಲೆ ಹಾಕಿ, ನಗದನ್ನು ವಶಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.