
ಬಾಗೇಪಲ್ಲಿ: ಕಾರ್ಮಿಕ ಸಂಹಿತೆಗಳ ಅಧಿಸೂಚನೆಯು ದೇಶದ ದುಡಿಯುವ ಜನರಿಗೆ ವಂಚನೆ ಆಗಿರುವುದರಿಂದ, ರಾಜ್ಯದಲ್ಲಿ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸದಂತೆ ಒತ್ತಾಯಿಸಿ ಸಿಐಟಿಯು ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಮುಖಂಡರು ಬುಧವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂದೆ ಪ್ರತಿಭಟನೆ ನಡೆಸಿದರು.
ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಜಿ.ಮುಸ್ತಾಫ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿಯಾದ ಕರಾಳ ಕಾಯ್ದೆಗಳ ಅಧಿಸೂಚನೆ ಮಾಡಿದೆ. ಕಾರ್ಮಿಕ ಸಂಹಿತೆಗಳನ್ನು ಸರ್ಕಾರ ಏಕಪಕ್ಷೀಯವಾಗಿ ಜಾರಿಗೊಳಿಸಿರುವುದು ಕಾರ್ಮಿಕ ಸಂಘಗಳ ವೇದಿಕೆ ಖಂಡಿಸುತ್ತದೆ. ನವೆಂಬರ್ 21 ರಂದು 4 ಕಾರ್ಮಿಕ ಸಂಹಿತೆಗಳನ್ನು ಕಾರ್ಮಿಕರ ತೀವ್ರ ವಿರೋಧದ ನಡುವೆಯೂ ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೊಳಿಸಲು ಮುಂದಾಗಿದೆ. 4 ಕಾರ್ಮಿಕರ ಕಾಯ್ದೆಗಳು ಕಾರ್ಮಿಕರಿಗೆ ಕರಾಳ ಆಗಿವೆ. ಕೇಂದ್ರ ಸರ್ಕಾರ ಕಾರ್ಮಿಕರ ಹಿತರಕ್ಷಣೆಗೆ ಕಾರ್ಮಿಕ ಸಂಹಿತೆ ಜಾರಿ ಮಾಡಬಾರದು ಎಂದು ಒತ್ತಾಯಿಸಿದರು.
ಕಾರ್ಮಿಕ ಕಾಯ್ದೆಗಳು ದುಡಿಯುವ ಕಾರ್ಮಿಕರಿಗೆ ಮಾರಣಾಂತಿಕ ದಾಳಿ ಆಗಿದೆ. ಈ ಸಂಹಿತೆ ಜಾರಿ ಆದರೆ ಮುಂದಿನ ಪೀಳಿಗೆಯ ಭರವಸೆ, ನಂಬಿಕೆ ಮತ್ತು ಆಕಾಂಕ್ಷೆಗಳು ಇಲ್ಲವಾಗಿಸುತ್ತವೆ. ಇದರಿಂದ ಕೇಂದ್ರ ಸರ್ಕಾರದ 4 ಕಾರ್ಮಿಕ ಸಂಹಿತೆಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು ಎಂದರು.
ಮುಖಂಡ ಎಂ.ಎನ್.ರಘುರಾಮರೆಡ್ಡಿ, ಬಿಳ್ಳೂರುನಾಗರಾಜ್, ಚನ್ನರಾಯಪ್ಪ, ಡಿ.ಟಿ.ಮುನಿಸ್ವಾಮಿ, ಅಶ್ವತ್ಥಪ್ಪ, ಜಿ.ಕೃಷ್ಣಪ್ಪ ರವಣಪ್ಪ, ಜಿ.ಸೋಮಶೇಖರ, ರವಣಪ್ಪ, ಇಮ್ರಾನ್, ರಾಮಾಂಜಿ, ಎ.ಸೋಮಶೇಖರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.