ADVERTISEMENT

ವರ್ಷ ತೊಡಕು; ಮಾಂಸ ಖರೀದಿ ಜೋರು 

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 6:56 IST
Last Updated 26 ಮಾರ್ಚ್ 2020, 6:56 IST

ಚಿಕ್ಕಬಳ್ಳಾಪುರ: ಯುಗಾದಿ ಹಬ್ಬದ ಮಾರನೆಯ ದಿನ ಆಚರಿಸುವ ವರ್ಷ ತೊಡಕು ಆಚರಣೆಯನ್ನು ಜಿಲ್ಲೆಯಲ್ಲಿ ಗುರುವಾರ ಲಾಕ್‌ಡೌನ್‌ ನಡುವೆಯೂ ಜನರು ಸಂಭ್ರಮದಿಂದ ಆಚರಿಸಿದರು.

ಕಠಿಣ ನಿರ್ಬಂಧದ ನಡುವೆಯೂ ಜಿಲ್ಲೆಯಾದ್ಯಂತ ಮಟನ್‌ ವ್ಯಾಪಾರ ಜೋರಾಗಿಯೇ ಕಂಡುಬಂತು. ಬುಧವಾರ ಮನೆಯಲ್ಲಿಯೇ ಯುಗಾದಿ ಹಬ್ಬ ಆಚರಿಸಿ ಹೋಳಿಗೆ ಊಟ ಸವಿದ ಜನರು ಗುರುವಾರ ಮಾಂಸ ಖರೀದಿಗೆ ಮುಗಿಬಿದ್ದರು

ವರ್ಷ ತೊಡಕು ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನವಾದ್ದರಿಂದ ಜನರು ವರ್ಷಪೂರ್ತಿ ಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.