ADVERTISEMENT

ಬಾಗೇಪಲ್ಲಿ ಸರ್ಕಾರಿ ಶಾಲೆಗೆ ದಾಖಲಾದ ಮೇಘಾಲಯದ 25 ಮಕ್ಕಳು

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 13:38 IST
Last Updated 12 ಜೂನ್ 2025, 13:38 IST
ಬಾಗೇಪಲ್ಲಿ ಪಟ್ಟಣದ ಪಿಎಂಶ್ರೀ ಸರ್ಕಾರಿ ಬಾಲಕಿಯರ ಹಿರಿಯ ಮಾದರಿ ಪ್ರಾಥಮಿಕ ಶಾಲೆಗೆ ದಾಖಲಾದ 25 ವಿದ್ಯಾರ್ಥಿನಿಯರು ಸೇರ್ಪಡೆಯಾದರು
ಬಾಗೇಪಲ್ಲಿ ಪಟ್ಟಣದ ಪಿಎಂಶ್ರೀ ಸರ್ಕಾರಿ ಬಾಲಕಿಯರ ಹಿರಿಯ ಮಾದರಿ ಪ್ರಾಥಮಿಕ ಶಾಲೆಗೆ ದಾಖಲಾದ 25 ವಿದ್ಯಾರ್ಥಿನಿಯರು ಸೇರ್ಪಡೆಯಾದರು   

ಬಾಗೇಪಲ್ಲಿ: ತಾಲ್ಲೂಕಿನ ಪೆನುಮಲೆ ಗ್ರಾಮದಲ್ಲಿನ ವಿದ್ಯಾರ್ಥಿನಿನಿಲಯಕ್ಕೆ ಬಂದಿರುವ ಮೇಘಾಲಯದ 25 ವಿದ್ಯಾರ್ಥಿನಿಯರು ಪಟ್ಟಣದ ಪಿಎಂ ಶ್ರೀ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ದಾಖಲಾಗಿದ್ದಾರೆ ಎಂದು ಶಾಲೆಯ ಮುಖ್ಯಶಿಕ್ಷಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ಹನುಮಂತರೆಡ್ಡಿ ತಿಳಿಸಿದ್ದಾರೆ.

ಶಾಲೆಗೆ ದಾಖಲಾದ 25 ಮೇಘಾಲಯದ ವಿದ್ಯಾರ್ಥಿನಿಯರಿಗೆ ಇಂಗ್ಲೀಷ್ ಮಾಧ್ಯಮದ ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ ಎಂದರು. 

ತಾಲ್ಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆನುಮಲೆ ಗ್ರಾಮದಲ್ಲಿ ಸೌಮ್ಯ ಕೇಸಾನುಪಲ್ಲಿ ಸಹಭಾಗಿತ್ವದಲ್ಲಿ ಪುಣ್ಯಕೋಟಿ ಟ್ರಸ್ಟ್ 2025-26ನೇ ಸಾಲಿಗೆ ವಿದ್ಯಾರ್ಥಿನಿನಿಲಯ ಆರಂಭಿಸಿದೆ. ಬಡತನ ರೇಖೆಗಿಂತ ಕಡಿಮೆ ಇರುವ ಹೆಣ್ಣುಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ಇದೆ. ಮೇಘಾಲಯದ ಹೆಣ್ಣುಮಕ್ಕಳು ವಿದ್ಯಾರ್ಥಿನಿಲಯ ಸೇರಿದ್ದಾರೆ. ಪಟ್ಟಣದ ನಮ್ಮ ಪಿಎಂ ಶ್ರೀ ಸರ್ಕಾರಿ ಶಾಲೆಗೆ 25 ಹೆಣ್ಣು ಮಕ್ಕಳು ದಾಖಲಾಗಿದ್ದಾರೆ. 

ADVERTISEMENT

ವಿದ್ಯಾರ್ಥಿನಿಯರ ಪೈಕಿ, 2ನೇ ತರಗತಿಗೆ ಐವರು, 3ನೇ ತರಗತಿಗೆ 3, 4ನೇ ತರಗತಿಗೆ ಇಬ್ಬರು, 5ನೇ ಮೂವರು, 6ನೇ ತರಗತಿಗೆ ಐವರು ಹಾಗೂ 7ನೇ ತರಗತಿಗೆ 6 ಮಂದಿ ಸೇರಿ 25 ಮಂದಿ ನಮ್ಮ ಶಾಲೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದರು.

ದಾಖಲಾದ ಮಕ್ಕಳು ಹಿಂದಿ ಮಾತನಾಡುತ್ತಾರೆ. ಇಂಗ್ಲಿಷ್ ಭಾಷೆಯ ಮಾಧ್ಯಮದಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಲಾಗುವುದು. 

ವಿದ್ಯಾರ್ಥಿನಿಲಯದ ಸಿಬ್ಬಂದಿ ಪುಷ್ಪಾವತಿ, ಶಾಲೆಯ ಶಿಕ್ಷಕ ವೈ.ಎಂ.ಮಂಜುನಾಥರೆಡ್ಡಿ, ನರಸಿಂಹಮೂರ್ತಿ, ಶಿಕ್ಷಕಿ ಧರ್ಮಪುತ್ರಿ, ಬೇಬಿಮಮತಾಜ್, ಭಾರ್ಗವಿ, ರಜಿನಿ, ಕವಿತ, ಉಷಾ, ಪದ್ಮಜ, ರಾಧಿಕಾ, ಶ್ರೀಲೇಖ, ಕಲ್ಪನ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.