ADVERTISEMENT

ಚಿಕ್ಕಬಳ್ಳಾಪುರ ನಗರಸಭೆ: ನಗರಸಭೆ ಎಂಜಿನಿಯರ್ ಲೋಕಾಯುಕ್ತ ಬಲೆಗೆ

ಚಿಕ್ಕಬಳ್ಳಾಪುರ ನಗರಸಭೆ: ಗುತ್ತಿಗೆದಾರನಿಗೆ ಬಿಲ್ ಮಾಡಿಕೊಡಲು ಹಣ ಕೇಳಿದ ಅರುಣ್

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 16:05 IST
Last Updated 24 ಸೆಪ್ಟೆಂಬರ್ 2025, 16:05 IST
ಅರುಣ್ 
ಅರುಣ್    

ಚಿಕ್ಕಬಳ್ಳಾಪುರ: ಲಂಚ ಪಡೆಯುವಾಗ ಇಲ್ಲಿನ ನಗರಸಭೆ ಎಂಜಿನಿಯರ್ ಅರುಣ್ ಬುಧವಾರ ಲೋಕಾಯುಕ್ತರ ದಾಳಿಗೆ ಸಿಲುಕಿದ್ದಾರೆ. 

ಗುತ್ತಿಗೆದಾರರೊಬ್ಬರಿಗೆ ಬಿಲ್ ಮಾಡಿಕೊಡಲು ₹ 75 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಕಚೇರಿಯಲ್ಲಿ ಹಣ ಪಡೆಯುವಾಗಲೇ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ಗುತ್ತಿಗೆ ಕೆಲಸ ಮಾಡಿದ್ದ ಗುತ್ತಿಗೆದಾರರೊಬ್ಬರಿಗೆ ಬಿಲ್ ಮಾಡಿಕೊಡಲು ಅರುಣ್ ₹ 75 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಗುತ್ತಿಗೆದಾರ ಲೋಕಾಯುಕ್ತರಿಗೆ ದೂರು ನೀಡಿದ್ದರು.

ADVERTISEMENT

ಕಚೇರಿಯಲ್ಲಿಯೇ ₹ 35 ಸಾವಿರ ಪಡೆಯುವಾಗ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ವಿಚಾರಣೆ ಮುಂದುವರಿದಿದೆ.

 ನಗರಸಭೆ ಅಧಿಕಾರಿಗಳ ಲಂಚಾವತಾರದ ವಿರುದ್ಧ ಈ ಹಿಂದಿನಿಂದಲೂ ಆಕ್ರೋಶ ವ್ಯಕ್ತವಾಗುತ್ತಿತ್ತು. ಆದರೆ ಕೆಲವು ಅಧಿಕಾರಿಗಳು ಸಿಕ್ಕಿ ಹಾಕಿಕೊಳ್ಳದ ರೀತಿಯಲ್ಲಿ ವ್ಯವಹರಿಸುತ್ತಿದ್ದರು ಎನ್ನುವ ಮಾತು ನಗರದಲ್ಲಿ ಜನಜನಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.